ಗಂಟಾಲ್ಕಟ್ಟೆಯಲ್ಲಿ ನಾಳೆ ಖಾಝಿ ಸ್ವೀಕಾರ *14 ಮೊಹಲ್ಲಾಗಳ ಖಾಝಿಯಾಗಿ ಜಿಫ್ರಿ ತಂಙಳ್ ನೇಮಕ

Picture of Namma Bedra

Namma Bedra

Bureau Report

ಮೂಡುಬಿದಿರೆ ವಲಯ ಸಂಯುಕ್ತ ಜಮಾತ್ ವ್ಯಾಪ್ತಿಯ 14 ಮೊಹಲ್ಲಾಗಳ ಖಾಝಿಯನ್ನಾಗಿ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರನ್ನು ನೇಮಿಸಲಾಗಿದ್ದು ಅವರ ಖಾಝಿ ಸ್ವೀಕಾರ ಸಮಾರಂಭವು ನಾಳೆ ( ಮಂಗಳವಾರ) ಸಂಜೆ 3 ಗಂಟೆಗೆ ಗಂಟಾಲ್ಕಟ್ಟೆಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಮೂಡುಬಿದಿರೆ ವಲಯ ಸಂಯುಕ್ತ ಜಮಾತ್ ಅಧ್ಯಕ್ಷ ಎಂ.ಅಬ್ದುಲ್ ರಹ್ಮಾನ್ (ಅಬ್ಬುವಾಕ) ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಯುಕ್ತ ಜಮಾತ್ ವ್ಯಾಪ್ತಿಯಲ್ಲಿ 21 ಮೊಹಲ್ಲಾಗಳಿದ್ದು ಈಗಾಗಲೇ14 ಮೊಹಲ್ಲಾಗಳು ನಾಳೆಯ ಸಮಾರಂಭದಲ್ಲಿ ತಂಙಳ್ ಅವರನ್ನು ಖಾಝಿಯನ್ನಾಗಿ ಸ್ವೀಕರಿಸಲಿದ್ದಾರೆಂದು ಅವರು ಮಾಹಿತಿ ನೀಡಿದರು.
ಸಯ್ಯಿದ್ ಆಲಿ ತಂಙಳ್ ಕುಂಬೋಳ್ ಅವರು ದುವಾ ಆಶೀರ್ವಚನ ನಡೆಸಲಿದ್ದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ವಿ.ವಿ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆಂದು ಕಾರ್ಯದರ್ಶಿ ಅಶ್ರಫ್ ಮರೋಡಿ ಅವರು ಮಾಹಿತಿ ನೀಡಿದರು.
ಅಬ್ದುಲ್ ರಹ್ಮಾನ್ (ಅಬ್ಬುವಾಕ) ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶೈಖುನಾ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಅವರು ಅನುಗ್ರಹ ಪ್ರಭಾಷಣ ನಡೆಸಲಿದ್ದು ಅಬ್ದುಲ್ ಸತ್ತಾರ್ ಪಂದಲ್ಲೂರ್ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ,ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ, ರಫೀಕ್ ಅಹ್ಮದ್ ಹುದವಿ ಕೋಲಾರ ಅವರು ಆಶಯ ಭಾಷಣ ಮಾಡಲಿದ್ದಾರೆಂದು ಅವರು ತಿಳಿಸಿದರು.
ಅಮೀರ್ ತಂಙಳ್ ಕಿನ್ಯ,ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ,ಅಕ್ರಮ್ ಅಲೀ ತಂಙಳ್ , ಶರೀಫ್ ದಾರಿಮಿ ಮೂಡುಬಿದಿರೆ ಹಾಗೂ ಇನ್ನೂ ಅನೇಕ ಧಾರ್ಮಿಕ ನೇತಾರರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದವರು ಮಾಹಿತಿ ನೀಡಿದರು.
ಪತ್ರಿಕಾ ಕಾರ್ಯದರ್ಶಿ ಮುಹಮ್ಮದ್ ಶಾಫಿ ಕಿರೋಡಿ, ಲಿಯಾಖತ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top