ಕಳೆದ ಇಪ್ಪತ್ತೈದು ವರ್ಷಗಳಿಂದ ಯಕ್ಷಗಾನ,ನೊಂದವರಿಗೆ ನೆರವು ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಪುಚ್ಚಮೊಗರು ಕಂಬಳಗುಡ್ಡೆ ಗೆಳೆಯರ ಬಳಗವು ಈಬಾರಿ ಎರಡು ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ದಿನಬಳಕೆಯ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ಬಡ ಕುಡುಂಬಗಳಿಗೆ ನೆರವಾಗಿದೆ.

ಗೆಳೆಯರ ಬಳಗದ ಅಧ್ಯಕ್ಷರಾದ ಆನಂದ ವಿ. ಪೂಜಾರಿ, ಹಿರಿಯ ಸದಸ್ಯರಾದ ಮಾರಪ್ಪ ಪೂಜಾರಿ, ಚಂದ್ರಹಾಸ ಶೆಟ್ಟಿ, ಭೋಜ ಬಂಗೇರ, ವಿಜಯ್ ಪೂಜಾರಿ, ಪದ್ಮಾವತಿ ಶೆಟ್ಟಿ, ಗೋಪಾಲ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







































