ಮೂಡುಬಿದಿರೆಯ ಕುವರಿ, ಚಿತ್ರನಟಿ ಅಕ್ಷತಾ ಅವರು ‘ನಮ್ಮ ಬೆದ್ರ’ ಕಚೇರಿಗೆ ಭೇಟಿ ನೀಡಿ ಈಬಾರಿಯ ದೀಪಾವಳಿ ವಿಶೇಷಾಂಕ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಡುಬಿದಿರೆಯವರಾಗಿರುವ ಅಕ್ಷತಾ ಅವರು ಆಳ್ವಾಸ್ ನಲ್ಲಿ ಎಂ.ಕಾಂ ಪದವಿ ಪಡೆದು ಬೆಂಗಳೂರಿನ ಕಂಪೆನಿಯೊಂದರಲ್ಲಿ ಎಚ್.ಆರ್ ಆಗಿ ಸೇರಿಕೊಂಡರು. ಮಾಡೆಲಿಂಗ್ ಹಾಗೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರಿಗೆ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ಅವಕಾಶ ಲಭಿಸಿದೆ.
ಪತ್ರಕರ್ತರಾದ ಯಶೋಧರ ಬಂಗೇರ, ಪ್ರೇಮಶ್ರೀ, ಬಾಲರಾಜ್ ನೆಲಗುಡ್ಡೆ, ದೀಪ್ತಿ ಸಾಲ್ಯಾನ್, ನಿಶಾ ಇರುವೈಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
