ಎಸ್.ಕೆ.ಎಸ್.ಎಸ್.ಎಫ್. ಕಾಶಿಪಟ್ಣ ವತಿಯಿಂದ ಮಿಲಾದ್ ಪ್ರಯುಕ್ತ ರಸ್ತೆ ಸ್ವಚ್ಚತಾ ಕಾರ್ಯಕ್ರಮ

Picture of Namma Bedra

Namma Bedra

Bureau Report

ಈದ್ ಮಿಲಾದ್ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್. ಕಾಶಿಪಟ್ಣ ಯುನಿಟ್ ಹಾಗೂ ದಾರುನ್ನೂರ್ ಯುನಿಟ್ ವತಿಯಿಂದ ಕಾಶಿಪಟ್ಣ ಗ್ರಾಮದ ರಸ್ತೆ ಬದಿಗಳಲ್ಲಿದ್ದ ಕಸ, ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಎಸ್.ಕೆ.ಎಸ್.ಎಸ್.ಎಫ್.ನ ಕಾಶಿಪಟ್ಣ ಹಾಗೂ ದಾರುನ್ನೂರ್ ಯುನಿಟ್ ನ ಸದಸ್ಯರು, ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಯುವಕರ ಈ ಸಾಮಾಜಿಕ ಸೇವೆಗೆ ಕಾಶಿಪಟ್ಣ ಗ್ರಾ.ಪಂ.ನಿಕಟಪೂರ್ವಾಧ್ಯಕ್ಷ ಸತೀಶ್ ಕೆ.ಹಾಗೂ ಪಿಡಿಒ‌ ಅವರು ಅಭಿನಂದಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top