ಶುಕ್ರವಾರದಿಂದ ಆರಂಭಗೊಂಡಿರುವ ಕಾಶಿಪಟ್ಣ ದಾರುನ್ನೂರ್ ಎಜುಕೇಶನ್ ಸೆಂಟರ್ ನ ದಶಮಾನೋತ್ಸವ ಸಮಾರಂಭವು ಅತ್ಯಂತ ಶಿಸ್ತುಬದ್ಧವಾಗಿ ನಡೆಯುತ್ತಿದ್ದು ಇಂದು ಹಾಗೂ ನಾಳೆ ನಡೆಯಲಿರುವ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಬಿ.ಎಂ.ಶರೀಫ್ ಹಾಜಿ ವೈಟ್ ಸ್ಟೋನ್ ಅವರು ಮನವಿ ಮಾಡಿದ್ದಾರೆ.
ನಿನ್ನೆಯಿಂದ ಆರಂಭಗೊಂಡಿರುವ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದೆ,ಈ ಅದ್ದೂರಿಯ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ,ವಿದ್ಯಾರ್ಥಿಗಳ ಪೋಚಕರಿಗೆ ಹಾಗೂ ಜನರಿಗೆ ಸರ್ವ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ, ಎಲ್ಲವೂ ಕೇಂದ್ರ ಸಮಿತಿಯ ಅಧ್ಯಕ್ಷರೂ,ಜಿಲ್ಲಾ ಖಾಝಿಯಾಗಿರುವ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಮಾರ್ಗದರ್ಶನದಲ್ಲಿ ಸುಸೂತ್ರವಾಗಿ ನಡೆಯುತ್ತಿದೆ,ಎಲ್ಲ ಸಮಿತಿಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ, ಮುಂದಿನ ಎರಡು ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳನ್ನೂ ಯಶಸ್ವಿಗೊಳಿಸಬೇಕೆಂದವರು ಕೋರಿದ್ದಾರೆ.
ನಾಳೆ ಮಧ್ಯಾಹ್ನ ಸೌಹಾರ್ದ ಸಮ್ಮೇಳನ ನಡೆಯಲಿದ್ದು ರಾಜಕೀಯ ನಾಯಕರು, ಧಾರ್ಮಿಕ ಹಾಗೂ ಶೈಕ್ಷಣಿಕ ಮುಖಂಡರು ಮತ್ತು ವಿಶೇಷವಾಗಿ ಸ್ಥಳೀಯ ಹಾಗೂ ಆಸುಪಾಸಿನ ಸರ್ವಧರ್ಮೀಯರು ಪಾಲ್ಗೊಳ್ಳಲಿದ್ದಾರೆ,ಈ ಕಾರ್ಯಕ್ರಮದ ಯಶಸ್ಸಿಗೆ ಸರ್ವಧರ್ಮೀಯರೂ ಸಹಕಾರ ನೀಡಿದ್ದಾರೆ ಎಂದಿರುವ ಅವರು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
