ಕಲ್ಲಮುಂಡ್ಕೂರು ಪಂಚಾಯತ್ ನ ಕಾಯ೯ದಶಿ೯ ಶೇಖರ್ ಅವರು ಪಿಡಿಒ ಆಗಿ ಮುಂಬಡ್ತಿಯೊಂದಿಗೆ ವಗಾ೯ವಣೆ

Picture of Namma Bedra

Namma Bedra

Bureau Report

ಮೂಡುಬಿದಿರೆ: ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿರುವ ಶೇಖರ್ ಅವರು ಪಿಡಿಒ ಆಗಿ ಮುಂಭಡ್ತಿ ಹೊಂದಿ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮ ಪಂಚಾಯತ್ ಗೆ ವಗಾ೯ವಣೆಗೊಂಡಿದ್ದಾರೆ.
ಶೇಖರ್ ಅವರು ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮ ಪಂಚಾಯತ್ ನಲ್ಲಿ 2009 ರಿಂದ 11 ವರ್ಷ ಗ್ರೇಡ್ -2 ಕಾರ್ಯದರ್ಶಿಯಾಗಿ, ಪ್ರಭಾರ ಪಿಡಿಒ ಆಗಿ, ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ದ್ವಿತೀಯ ದರ್ಜೆ ವಿಷಯ ನಿರ್ವಾಹಕ ಹುದ್ದೆಯಲ್ಲಿ ಕರ್ತವ್ಯ, ಮರೋಡಿ ಮತ್ತು ಲಾಯಿಲ ಗ್ರಾಮ ಪಂಚಾಯತ್ ದಲ್ಲಿ ಪ್ರಭಾರ ಕಾರ್ಯದರ್ಶಿಯಾಗಿದ್ದರು.
2020ರಲ್ಲಿ ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಗೆ ಗ್ರೇಡ್ -1 ಕಾರ್ಯದರ್ಶಿಯಾಗಿ ಮುಂಬಡ್ತಿ ವರ್ಗಾವಣೆಯಾಗಿ ಕರ್ತವ್ಯದ ಜೊತೆಗೆ ಪ್ರಭಾರ ಪಿಡಿಒ ಆಗಿ ಮತ್ತು ಹೊಸತಾಗಿ ರಚನೆಯಾದ ಮೂಡುಬಿದಿರೆ ತಾಲೂಕು ಪಂಚಾಯತ್ ನಲ್ಲಿ ಪ್ರಥಮ ದರ್ಜೆ ವಿಷಯ ನಿರ್ವಾಹಕರಾಗಿ, 2023ರಲ್ಲಿ ಇರುವೈಲ್ ಗ್ರಾಮ ಪಂಚಾಯತ್ ಗೆ ನಿಯೋಜನೆ ಹೊಂದಿ ಪ್ರಭಾರ ಪಿಡಿಒ ಆಗಿ ಕರ್ತವ್ಯದ ಜೊತೆಗೆ ಹೊಸಬೆಟ್ಟು ಗ್ರಾಮ ಪಂಚಾಯತ್ ನಲ್ಲಿಯೂ ಪಿಡಿಒ ಪ್ರಭಾರದಲ್ಲಿ 2 ಪಂಚಾಯತ್ ನಲ್ಲಿ ಏಕಕಾಲದಲ್ಲಿ ಕರ್ತವ್ಯ ಮಾಡಿ 2026 ರಲ್ಲಿ ಮರು ಕಲ್ಲಮುಂಡ್ಕೂರ್ ನಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯದಲ್ಲಿದ್ದು ಕೊಂಡು ಬಳಿಕ ಕಡ್ಡಾಯ ವರ್ಗಾವಣೆಯಲ್ಲಿ ಬೆಳುವಾಯಿ ಗ್ರಾಮ ಪಂಚಾಯತ್ ನಲ್ಲಿ ಗ್ರೇಡ್ – 1 ಕಾರ್ಯದರ್ಶಿ ಹುದ್ದೆಯಲ್ಲಿ 2 ತಿಂಗಲ್ಲಿಯೇ ಪಿಡಿಒ ಮುಂಬಡ್ತಿ ಹೊಂದಿ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top