ಶಿರ್ತಾಡಿ: ಗೆಲ್ಲು ಕಡಿಸಿ- ಜೀವ ಉಳಿಸಿ!

Picture of Namma Bedra

Namma Bedra

Bureau Report

ಇದು ಶಿರ್ತಾಡಿ ಸಮೀಪ ರಸ್ತೆ ಪಕ್ಕದಲ್ಲೇ ಇರುವ ಮರವೊಂದರ ಗೆಲ್ಲು.ರಸ್ತೆಗೇ ಬೀಳುವ ಸ್ಥಿತಿಯಲ್ಲಿದೆ.ಇದರ ಎಲ್ಯ ಮೆಗ್ಯೆ ಇತ್ತೀಚೆಗೆ ರಸ್ತೆಗೆ ಬಿದ್ದಿತ್ತು‌.ಸ್ಕೂಟರ್ ಸವಾರನೊಬ್ಬ ಜಸ್ಟ್ ಮಿಸ್ ಆಗಿ ಪಾರಾಗಿದ್ದಾನೆ.
ಜೋರಾದ ಗಾಳಿ ಮಳೆ ಬಂದರೆ ಈ ಮಲ್ಲಣ್ಣನಂತಿರುವ ಗೆಲ್ಲು ಕೂಡಾ ರಸ್ತೆಗೆ ಬೀಳುವುದು ಗ್ಯಾರಂಟಿ. ಒಂದು ವೇಳೆ ವಾಹನ,ಜನಸಂಚಾರದ ವೇಳೆ ಬಿದ್ದರೆ ಅಪಾಯ ಖಂಡಿತ.
ಅರಣ್ಯ ಇಲಾಖೆ ಇದನ್ನು ಕಡಿಯಬೇಕಾದರೆ ಮೆಸ್ಕಾಂ ನವರ ಸಹಕಾರ ಬೇಕು.ಎರಡೂ ಇಲಾಖೆಯವರು ಸೇರಿಕೊಂಡು ಈ ಗೆಲ್ಲನ್ನು ಕಡಿಸಿ ಜನರಿಗೆ ಉಪಕಾರವಾಗುವಂತಹ ಕೆಲಸ ಮಾಡಬೇಕಿದೆ.
ಗೆಲ್ಲಿನ ವಿಳಾಸ:
ಶಿರ್ತಾಡಿಯಿಂದ ಹೊಸ್ಮಾರು ಕಡೆಗೆ ಹೋಗುವಾಗ ಭುವನಜ್ಯೋತಿ ಶಾಲಾ ವಠಾರದ ಸ್ವಲ್ಪ ಮುಂದೆ.ಅಂಚಿಡ್ದ್ ಇಂಚಿ ಬರುವಾಗ ದಿ.ಆಲಿಬ್ಯಾರಿಯವರ ಮನೆಯ ಮುಂದೆ!

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top