ಮೂಡುಬಿದಿರೆ ಆಟೋರಿಕ್ಷಾ ಚಾಲಕ-ಮಾಲಕರ ಸಂಘ. ಅಧ್ಯಕ್ಷರಾಗಿ ಮಜೀದ್ ಕೊಡಂಗಲ್ಲು, ಪ್ರ. ಕಾರ್ಯದರ್ಶಿಯಾಗಿ ಸಂತೋಷ್ ಬಾಕ್ಯಾರ್ ಕೋಡಿ

Picture of Namma Bedra

Namma Bedra

Bureau Report

ಮೂಡುಬಿದಿರೆ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಮಜೀದ್ ಕೊಡಂಗಲ್ಲು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಬಾಕ್ಯಾರ್ ಕೋಡಿ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ವಕೀಲರಾದ ಶರತ್ ಶೆಟ್ಟಿ ಅವರು ಸಂಘದ ಗೌರವಾಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಉಪಾಧ್ಯಕ್ಷರಾಗಿ ಗೋಪಿನಾಥ ಮಾರೂರು,ನಾರಾಯಣ ಪೂಜಾರಿ ಕಲ್ಲಬೆಟ್ಟು ಹಾಗೂ ಭಾಸ್ಕರ ಕುಲಾಲ್ ಕೋಟೆಬಾಗಿಲು ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ದಿನೇಶ್ ಮಾರ್ನಾಡ್, ಜತೆ ಕಾರ್ಯದರ್ಶಿಗಳಾಗಿ ಸುದರ್ಶನ್ ಕಾಯರ್ಗುಂಡಿ ಹಾಗೂ ಸಂಪತ್ ಜೈನ್,ಗೌರವ ಸಲಹೆಗಾರರಾಗಿ ದೀಪಕ್ ರಾಜ್ ಕೊಡಂಗಲ್ಲು ಹಾಗೂ ಪ್ರಶಾಂತ್ ಅಂಚನ್ ಒಂಟಿಕಟ್ಟೆ ಅವರು ಆಯ್ಕೆಯಾಗಿದ್ದಾರೆ.
ಮಾಜಿ ಅಧ್ಯಕ್ಷರಾದ ರಾಮಚಂದ್ರ ಭಟ್,ಭಾಸ್ಕರ ಆಚಾರ್ಯ, ಸುರೇಶ್ ಕೋಟ್ಯಾನ್,ಜಯರಾಮ್ ರಾವ್,ಪ್ರದೀಪ್ ರೈ ಹಾಗೂ ಆನಂದ ಪೂಜಾರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜೇಶ್ ಸುವರ್ಣ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top