ಮೂಡುಬಿದಿರೆ ಯುವವಾಹಿನಿಯಿಂದ ಮಾನವೀಯ ಸ್ಪಂದನೆ. *ಸಂಕಷ್ಟದಲ್ಲಿದ್ದ ಮೂರು ಕುಟುಂಬಗಳಿಗೆ ನೆರವು

Picture of Namma Bedra

Namma Bedra

Bureau Report

ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ನಿರ್ದೇಶಕರಾದ ಉಮೇಶ್ ಕೋಟ್ಯಾನ್ ಅವರ ಸಹಕಾರದೊಂದಿಗೆ ಮೂಡುಬಿದಿರೆ ವ್ಯಾಪ್ತಿಯ ಮೂರು ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ಹಾಗೂ ಅವರ ಮನೆಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಿದೆ.


ರೇಂಜ್ ಫಾರೆಸ್ಟ್ ಆಫೀಸ್ ಬಳಿಯ ನಿವಾಸಿ,ಬಡ ರಿಕ್ಷಾ ಚಾಲಕ ಇಬ್ರಾಹಿಂ ಅವರ ಅನಾರೋಗ್ಯ ಸಮಸ್ಯೆಗೆ ಸ್ಪಂದಿಸಿ ಆರ್ಥಿಕ ಧನಸಹಾಯದೊಂದಿಗೆ ದಿನಸಿ ಸಾಮಾಗ್ರಿ,ಮೂಡುಮಾರ್ನಾಡು ಗ್ರಾಮದ ಹೊಸಮನೆ ಪರಪು ನಿವಾಸಿ ಶ್ರೀಮತಿ ಸರಸ್ವತಿ ಅವರ ಬಡ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿ ಆರ್ಥಿಕ ಸಹಾಯ ಮತ್ತು ದಿನಸಿ ಸಾಮಾಗ್ರಿ ಹಾಗೂ ಚಾಮುಂಡಿಬೆಟ್ಟ ನಿವಾಸಿ ಬೇಬಿ ಪೂಜಾರಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಹಾಗೂ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿದೆ.
ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಶಂಕರ್ ಎ.ಕೋಟ್ಯಾನ್, ಸಮಾಜ ಸೇವಾ ನಿರ್ದೇಶಕರಾದ ಉಮೇಶ್ ಕೋಟ್ಯಾನ್, ಜಗದೀಶ್ಚಂದ್ರ ಡಿ.ಕೆ, ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು,ಕೇಂದ್ರ ಸಮಿತಿಯ ಜಾಲತಾಣ ನಿರ್ದೇಶಕರಾದ ರಾಜೇಶ್ ಬಂಟ್ವಾಳ, ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕ ಶುಭಕರ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top