ಅಷ್ಟಮಿದ ಪಿಲಿಗೊಬ್ಬು: ಹಳೆಯ ‘ಹುಲಿ’ಗಳಿಗೆ ಸನ್ಮಾನ

Picture of Namma Bedra

Namma Bedra

Bureau Report

ಶನಿವಾರ ನಡೆದ ಮೂಡುಬಿದಿರೆಯ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಜವನೆರ್ ಬೆದ್ರ ಸಂಘಟನೆ ಹಮ್ಮಿಕೊಂಡಿದ್ದ ‘ಅಷ್ಟಮಿದ ಪಿಲಿಗೊಬ್ಬು’ ಕಾರ್ಯಕ್ರಮದಲ್ಲಿ 60 ರ ದಶಕದಲ್ಲಿ ಹುಲಿವೇಷ ತಂಡದಲ್ಲಿ ಕಲಾವಿದರಾಗಿ ಜನಪ್ರಿಯತೆ ಗಳಿಸಿದ್ದ ಸುಂದರ ದೇವಾಡಿಗ ಹಾಗೂ ಉದಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ‘ಅಷ್ಟಮಿದ ಪಿಲಿಗೊಬ್ಬು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಲ್ಕೂ ತಂಡಗಳೂ ಒಂದೇ ವೇದಿಕೆಯಲ್ಲಿ ಕುಣಿದದ್ದು ಮೂಡುಬಿದಿರೆಯ ಇತಿಹಾಸದಲ್ಲಿ ಮೊದಲು ಎಂಬ ದಾಖಲೆ ನಿರ್ಮಿಸಿತು.
ಪೊಳಲಿ ಟೈಗರ್ಸ್ ತಂಡದ ಮಾಲಕರಾದ ಸಂತೋಷ್ ಶೆಟ್ಟಿ ಅವರು ತಾಸೆ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪುರಸಭಾ ಮಾಜಿ ಸದಸ್ಯರಾದ ನಾಗರಾಜ್ ಪೂಜಾರಿ, ಪುರಂದರ ದೇವಾಡಿಗ,ರಾಜೇಶ್ ಆಚಾರ್ಯ, ಗುತ್ತಿಗೆದಾರ ಗುರು ಒಂಟಿಕಟ್ಟೆ, ಪ್ರವೀಣ್ ಶೆಟ್ಟಿ, ಗಂಗಾಧರ ಶೆಟ್ಟಿ, ಪ್ರಸಾದ್ ದೇವಾಡಿಗ,ಅಜಿತ್,ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಸಂಚಾಲಕ ರಂಜಿತ್ ಶೆಟ್ಟಿ, ಕಾರ್ಯದರ್ಶಿ ದಿನೇಶ್ ನಾಯ್ಕ್, ಉಪಾಧ್ಯಕ್ಷ ನಾರಾಯಣ ಪಡುಮಲೆ,ಜತೆ ಕಾರ್ಯದರ್ಶಿ ಸಂದೀಪ್ ಕೆಲ್ಲಪುತ್ತಿಗೆ, ಸುಮಂತ್ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top