ಎಸ್.ಕೆ.ಎಸ್.ಎಸ್.ಎಫ್.ಪಡ್ಡಂದಡ್ಕ ಶಾಖೆ ವತಿಯಿಂದ ಅಶಕ್ತ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು

Picture of Namma Bedra

Namma Bedra

Bureau Report

ಪಡ್ಡಂದಡ್ಕ ಜಮಾತಿಗೊಳಪಟ್ಟಿರುವ ಎರಡು ಬಡ ಕುಟುಂಬಗಳ ಹೆಣ್ಣುಮಕ್ಕಳ ಮದುವೆಗೆ ಉದ್ಯಮಿ, ಜಮಾತ್ ಕಮಿಟಿಯ ಮಾಜಿ ಅಧ್ಯಕ್ಷ ಯು.ಕೆ.ಮುಹಮ್ಮದ್ ಹಾಜಿ ಅವರ ನೇತೃತ್ವದಲ್ಲಿ ಎಸ್.ಕೆ.ಎಸ್.ಎಸ್.ಎಫ್.ಪಡ್ಡಂದಡ್ಕ ಶಾಖೆಯ ಮುಖಾಂತರ ಸುಮಾರು ನಾಲ್ಕೂವರೆ ಲಕ್ಷ ರೂ.ಆರ್ಥಿಕ ನೆರವು ನೀಡಲಾಯಿತು.
ಮಸೀದಿಯ ಖತೀಬರಾದ ಸಮೀರ್ ದಾರಿಮಿ ಅವರು ದುವಾ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಮಸೀದಿ ಕಮಿಟಿಯ ಅಧ್ಯಕ್ಷರಾದ ಪುತ್ತುಮೋನು ಗಾಂಧಿನಗರ, ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ,ಪೆರಿಂಜೆ ಮದರಸದ ಅಧ್ಯಾಪಕ ಸಿದ್ದೀಕ್ ಮುಸ್ಲಿಯಾರ್, ಮಾಜಿ ಅಧ್ಯಾಪಕ ಅಲ್ತಾಫ್ ದಾರಿಮಿ, ಮಾಜಿ ಕಾರ್ಯದರ್ಶಿಗಳಾದ ರಫೀಕ್ ಪಡ್ಡ,ಅಬ್ದುಸ್ಸಲಾಮ್ ಶಾಂತಿನಗರ, ಪತ್ರಕರ್ತ ಹೆಚ್.ಮುಹಮ್ಮದ್ ವೇಣೂರು, ಪ್ರಮುಖರಾದ ಅಶ್ರಫ್ ಶಾಂತಿನಗರ,ಎಸ್.ಕೆ.ಎಸ್.ಎಸ್.ಎಫ್.ಉಪಾಧ್ಯಕ್ಷ ಹಕೀಮ್ ಗಾಂಧಿನಗರ, ಕಾರ್ಯದರ್ಶಿ ಸ್ವರೂಪ್ ಕಟ್ಟೆಬಳಿ, ಕೋಶಾಧಿಕಾರಿ ಇಕ್ಬಾಲ್ ಕುರ್ಲೊಟ್ಟು,ಅಶ್ರಫ್ ಕಿರೋಡಿ,ಯುವ ಉದ್ಯಮಿ ಯು.ಕೆ.ಇರ್ಫಾನ್, ಮನ್ಸೂರ್ ಮೂಡುಬಿದಿರೆ, ಎಸ್.ಕೆ.ರಝಾಕ್,ಯಾಕೂಬ್ ಪೆರಿಂಜೆ,ಶಬ್ಬೀರ್ ಪಡ್ಡ,ಝೈನುದ್ದೀನ್ ಪೆರಿಂಜೆ ಮತ್ತಿತರರು ಉಪಸ್ಥಿತರಿದ್ದರು.
ಮದರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಮುಹಮ್ಮದ್ ಶಾಫಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top