ಲೇಖನ: ಯಶು ಬೆದ್ರ.
ಬೆಂಗಳೂರು ಎಂಬ ಮಾಯನಗರಿಗೆ ಉದ್ಯೋಗಕ್ಕೆ ತೆರಳಿದ ಯುವತಿ, ತನ್ನ ಶ್ರಮ, ಪ್ರತಿಭೆಯ ಮೂಲಕ ಸ್ಯಾಂಡಲ್‌ವುಡ್ ಹಾಗೂ ಇತರ ಭಾಷೆಗಳ ಚಿತ್ರಗಳಲ್ಲಿ ಉದಯೋನ್ಮುಖ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೂಡುಬಿದಿರೆಯ ಕೃಷ್ಣಪ್ಪ ಮತ್ತು ಮಲ್ಲಿಕಾ ದಂಪತಿಯ ಪುತ್ರಿ ಅಕ್ಷತಾ ಮಾಡೆಲಿಂಗ್, ಸಿನಿಮಾ ರಂಗದಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಎಂ.ಕಾಂ ಪದವಿ ಮುಗಿಸಿದ ಬಳಿಕ ಅಕ್ಷತಾ ಅವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಎರಡು ವರ್ಷಗಳ ಹಿಂದೆ ಎಚ್.ಆರ್ ಆಗಿ ಸೇರಿಕೊಳ್ಳುತ್ತಾರೆ. ಮಾಡೆಲಿಂಗ್ ಹಾಗೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಈಕೆಯನ್ನು ಸ್ಯಾಂಡಲ್‌ವುಡ್, ಮಾಡೆಲಿಂಗ್ ಕ್ಷೇತ್ರ ತನ್ನತ್ತ ಸೆಳೆಯುತ್ತದೆ. ಎರಡು ಕಿರುಚಿತ್ರಗಳಲ್ಲಿ ಕಾಣಿಸಿಕೊಂಡ ಈಕೆ. ಒಂದು ಕನ್ನಡ ವೆಬ್ ಸಿರೀಸ್‌ನಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದು, ತನ್ನ ಅಭಿಯನದ ಮೂಲಕ ಮುಂದೆ ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜ್ಯುವೆಲ್ಲರಿ ಸಹಿತ ವಿವಿಧ ಪ್ರಾಡಕ್ಟಳ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದು, ಕಿರುಚಿತ್ರ. ಸಿನಿಮಾ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಮೊದಲು ಗುಬ್ಬಚ್ಚಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ವಿ7 ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ‘ಕಲಿ ಕದನದೊಳ್’ ಸಿನಿಮಾದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳ್, ತೆಲುಗು, ಮಲಯಾಳಂನಲ್ಲೂ ತೆರೆ ಕಾಣಲಿದೆ. ಈ ಮೂಲಕ ಈಕೆ ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲದೆ, ಬಹುಭಾಷ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ವಿ7 ಬ್ಯಾನರ್‌ನ ಎರಡು ಸಿನಿಮಾಗಳಲ್ಲೂ ಈಕೆ ಕಾಣಿಸಿಕೊಳ್ಳಲಿದ್ದಾರೆ. ಹಲವಾರು ಪ್ರತಿಭೆಗಳನ್ನು ನಾಡಿಗೆ. ಸಿನಿಮಾ, ನಟನೆಯ ರಂಗಕ್ಕೆ ಪರಿಚಯಿಸಿದ ಮೂಡುಬಿದಿರೆಯಿಂದ ಮತ್ತೊಂದು ಪ್ರತಿಭೆ ಬೆಳಗುತ್ತಿರುವುದು ಹೆಮ್ಮೆಯ ವಿಚಾರ. ಅಕ್ಷತಾ ಅವರು ಕೇವಲ ಕನ್ನಡ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಹೆಸರು ಗಳಿಸಿ ಹೆತ್ತವರಿಗೆ, ಊರಿಗೆ ಕೀರ್ತಿ ತರುವಂತಾಗಲಿ ಎನ್ನುವುದು ನಮ್ಮೆಲ್ಲರ ಆಶಯ.
