Latest News

ಕಾರ್ಕಳದಲ್ಲಿ ಜೋನ್ಸ್ ಹೈಟೆಕ್ ಅಗ್ರಿ ಸೊಲ್ಯೂಷನ್ ಶುಭಾರಂಭ

Picture of Namma Bedra

Namma Bedra

Bureau Report

ಮೂಡುಬಿದಿರೆಯಲ್ಲಿ ಕೃಷಿಕರು ಮತ್ತು ಜನಸಾಮಾನ್ಯರಿಗೆ ನೀಡುವ ಸೇವೆಯಲ್ಲಿ ಮನೆಮಾತಾಗಿರುವ ಲೋಬೋ ಡ್ರೇಡರ್ಸ್ ನ ಅಂಗಸಂಸ್ಥೆ ಜೋಯಲ್ ಕೊರೆಯಾ ಅವರ ಮಾಲೀಕತ್ವದಲ್ಲಿ ಜೋನ್ಸ್ ಹೈಟೆಕ್ ಅಗ್ರಿ ಸೊಲ್ಯೂಷನ್ ಹೆಸರಿನಲ್ಲಿ ಕಾರ್ಕಳ ಬಂಗ್ಲೆಗುಡ್ಡೆಯ ನಮನ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಅಲಂಗಾರು ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಮೆಲ್ವಿನ್ ನೊರೋನ್ಹ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಆಶೀರ್ವದಿಸಿದರು.
ಲೋಬೋ ಟ್ರೇಡರ್ಸ್ ನ ಮಾಲಕರಾದ ಎರಿಕ್ ಲೋಬೋ,ರಾಮಕೃಷ್ಣ ಕಡಂಬ,ಪಂಚಾಯತ್ ಸದಸ್ಯರಾದ ವಿಶ್ವನಾಥ್, ಜೋನ್ ಪಿಂಟೊ, ಸಂಸ್ಥೆಯ ಹಿತೈಷಿಗಳಾದ ಸಂದೀಪ್ ರಾಡ್ರಿಗಸ್,ಅನೀಶ್ ಡಿಸೋಜ, ಜಾನ್ ಕೊರೆಯ,ರೋಜಿ ಕೊರೆಯ,ಜೆರಾಲ್ಡ್ ಲೋಬೋ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿ ಜೋಯಲ್ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು