Latest News

ನ.10ರಂದು ಶಿರ್ತಾಡಿಯಲ್ಲಿ ವಿಶ್ವ ಶಾಂತಿಯಾಗ

Picture of Namma Bedra

Namma Bedra

Bureau Report

ಮೂಡುಬಿದಿರೆ: ಕೇರಳದ ಶಿವಗಿರಿಯಲ್ಲಿ ದಿನನಿತ್ಯ ನಡೆಯುವ ವಿಶ್ವ ಶಾಂತಿಯಾಗವು ನವೆಂಬರ್ 10ರಂದು ಶಿರ್ತಾಡಿಯಲ್ಲಿರುವ ಬಿಲ್ಲವ ಸಂಘದ ಸಭಾಭವನದಲ್ಲಿ ನಡೆಯಲಿದೆ. ಸರ್ವರ ಸಹಬಾಳ್ವೆ ಮತ್ತು ಶಾಂತಿಗಾಗಿ ಪ್ರೇರೆಪಿಸಲಿದೆ ಎಂದು ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಶಿರ್ತಾಡಿಯ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಸೇವಾ ಸಂಘ, ಮಹಿಳಾ ಘಟಕ, ಕರ್ನಾಟಕ ರಾಜ್ಯ ಶ್ರೀ ನಾರಾಯಗುರು ವೈದಿಕ ಸಮಿತಿ ಮಂಗಳೂರು ಹಾಗೂ 48 ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಂದು ಮುಂಜಾನೆಯಿAದ ಗುರುಪೂಜೆ, ಯಾಗ ನಡೆಯಲಿದೆ. ಬೆಳಗ್ಗೆ 11.00 ಗಂಟೆಗೆ ಯಾಗ ಪೂರ್ಣಾಹುತಿಗೊಳ್ಳಲಿದೆ. ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ ನಡೆಯಲಿದೆ. ಕೇರಳ ಶಿವಗಿರಿ ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ, ದಿವ್ಯಸಾನಿಧ್ಯದಲ್ಲಿ ನಡೆಯಲಿರುವ ವಿಶ್ವಶಾಂತಿ ಯಾಗಇವರ ಸಹಯೋಗದೊಂದಿಗೆ ನಡೆಯಲಿದೆ ಎಂದು ತಿಳಿಸಿದರು.
ಶಿರ್ತಾಡಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಶಾಂತಿ, ವಿಶ್ವಶಾಂತಿ ಯಾಗ ಸಂಚಾಲಕ ವಿಶ್ವನಾಥ ಕೋಟ್ಯಾನ್ ಹನ್ನೇರ್, ಸಂಘದ ಗೌರವಾಧ್ಯಕ್ಷ ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕುಶಲ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಗಂಧಿ ಕೃಷ್ಣ, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸುವರ್ಣ, ಜೊತೆ ಕಾರ್ಯದರ್ಶಿ ಕುಶಲ್ ಕುಮಾರ್, ಗೌರವ ಸಲಹೆಗಾರರಾದ ಪಿ.ಕೆ ರಾಜು ಪೂಜಾರಿ, ರುಕ್ಕಯ್ಯ ಪೂಜಾರಿ, ಲಕ್ಷ್ಮಣ ಕೋಟ್ಯಾನ್, ಅಪ್ಪು ಪೂಜಾರಿ, ರಾಘವ ಪಿ. ಸುವರ್ಣ, ಕೋಶಾಧಿಕಾರಿ ಸುರೇಂದ್ರ ಕಂದಿರು, ಪ್ರಮುಖರಾದ ನಾಭಿರಾಜ್, ಅಚ್ಚಪ್ಪ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು