ಎಂ.ಸಿ.ಸಿ.ಬ್ಯಾಂಕ್ ಮೂಡುಬಿದಿರೆ ಶಾಖೆಯು ಮೂಡುಬಿದಿರೆಯ ಪ್ರವಾಸಿ ಬಂಗ್ಲೆಯ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಪತ್ರಿಕಾಭವನ ಕಟ್ಟಡಕ್ಕೆ ಸ್ಥಳಾಂತರಗೊಂಡು ನಾಳೆ ಉದ್ಘಾಟನೆಗೊಳ್ಳಲಿದೆ.
ಬೆಳಿಗ್ಗೆ 11 ಗಂಟೆಗೆ ಬ್ಯಾಂಕ್ ಅಧ್ಯಕ್ಷ, ಸಹಕಾರರತ್ನ ಅನಿಲ್ ಲೋಬೋ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೂಡುಬಿದಿರೆ ಕೋರ್ಪಸ್ ಕ್ರೈಸ್ಟ್ ಚರ್ಚ್ ನ ಧರ್ಮಗುರುಗಳಾದ ರೆ.ಫಾ ಓನಿಲ್ ಡಿಸೋಜ ಅವರು ಆಶೀರ್ವದಿಸಲಿದ್ದಾರೆ.
ಅಲಂಗಾರು ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಮೆಲ್ವಿನ್ ನೊರೊನ್ಹ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಮಾಜಿ ಸಚಿವ ಕೆ.ಅಭಯಚಂದ್ರ,ಅಲಂಗಾರು ಕ್ರೈಸ್ಟ್ ಕಿಂಗ್ ಕಾನ್ವೆಂಟ್ ನ ಸಿ.ಸುನೀತಾ ಡಿಸೋಜ, ನ್ಯಾಯವಾದಿ ಪ್ರವೀಣ್ ಎಸ್.ಲೋಬೋ,ಉದ್ಯಮಿ ರೋಹನ್ ರಾಜೇಶ್ ಮೆಂಡಿಸ್, ಬದ್ರಿಯಾ ಜುಮ್ಮಾ ಮಸೀದಿ ಕಮಿಟಿ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಗೂ ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.



