ಆರನೇ ವರ್ಷದ ಗೋದಾನ ಕಾರ್ಯಕ್ರಮ ಮತ್ತು 75 ನೇ ವರ್ಷದ ಸಂಭ್ರಮದಲ್ಲಿರುವ ಮೂಡುಬಿದಿರೆ ಆಳ್ವಾಸ್ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಅವರಿಗೆ ‘ಬೆದರದ ಕಾಮಧೇನು’ ಬಿರುದು ನೀಡಿ ಗೌರವಿಸಲಾಗುವುದೆಂದು ಕಾರ್ಯಕ್ರಮದ ರೂವಾರಿ, ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಆರು ವರ್ಷಗಳಿಂದ ನಡೆದ ಕಾರ್ಯಕ್ರಮಗಳು, ಸಾಧಕರಿಗೆ ಗೌರವಿಸಿರುವುದನ್ನು ವಿವರಿಸಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣ ಅರಸರಾದ ಡಾ.ಪದ್ಮಪ್ರಸಾದ್ ಅಜಿಲ ಅವರು ಡಾ.ಆಳ್ವರಿಗೆ ಸನ್ಮಾನ ಪ್ರದಾನ ಮಾಡಲಿದ್ದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಎನ್.ಆರ್.ದಾಮೋದರ ಶರ್ಮಾ ಅವರು ನುಡಿ ತೋರಣ ಮಾಡಲಿದ್ದಾರೆ.
ಮೂಡುಬಿದಿರೆ ಉದ್ಯಮಿ ಕೆ.ಶ್ರೀಪತಿ ಭಟ್ ಸಹಿತ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಅವರು ಮಾಹಿತಿ ನೀಡಿದರು.
ಕೆ.ಶ್ರೀಪತಿ ಭಟ್,ವಿಶ್ವನಾಥ ಶೆಟ್ಟಿ,ಯತೀಶ್ ಶೆಟ್ಟಿ, ರುಕ್ಕಯ್ಯ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



