ಪುತ್ತಿಗೆ ಜಿ.ಪಂ.ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗೆ *ಬಿಜೆಪಿಯಿಂದ ಶಾಂತಿಪ್ರಸಾದ್ ಹೆಗ್ಡೆ, ಕಾಂಗ್ರೆಸ್ ನಿಂದ ಸುಚರಿತ ಶೆಟ್ಟಿ?

Picture of Namma Bedra

Namma Bedra

Bureau Report

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಅಂತಿಮವಾದ ಮೀಸಲಾತಿ ಪ್ರಕಟಗೊಂಡಿದೆ.
ಮೂಡುಬಿದಿರೆ ತಾಲೂಕಿನಲ್ಲಿ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಮತ್ತು 9 ತಾಲೂಕು ಪಂಚಾಯತ್ ಕ್ಷೇತ್ರಗಳಿದೆ.ಈ ಹಿಂದೆ ಪ್ರಕಟವಾದ ಮೀಸಲಾತಿಯಿಂದ ಬದಲಾವಣೆಯಾಗಿರುವುದು ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಮೀಸಲಾತಿ ಮಾತ್ರ.ಈ ಹಿಂದೆ ಹಿಂದುಳಿದ ವರ್ಗ ಎ.ಮೀಸಲಾತಿ ಪ್ರಕಟಗೊಂಡಿತ್ತು.ಇದೀಗ ಅಂತಿಮವಾಗಿ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿರುವುದರಿಂದ ಆಕಾಂಕ್ಷಿಗಳ ಪಟ್ಟಿ ಎರಡು ಪ್ರಮುಖ ಪಕ್ಷಗಳಲ್ಲಿ ಹೆಚ್ಚುತ್ತಿದೆ.
ಆದರೆ ಅಚ್ಚರಿಯ ಬೆಳವಣಿಗೆಯ ಪ್ರಕಾರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆಂದೂ, ಕಾಂಗ್ರೆಸ್ ನಿಂದ ಅವರೇ ಅಭ್ಯರ್ಥಿಯಾಗುತ್ತಾರೆಂಬ ಅಂತೆಗಂತೆಗಳು ಕೇಳಿ ಬರುತ್ತಿದೆ.
ಶಾಂತಿಪ್ರಸಾದ್ ಹೆಗ್ಡೆಯವರ ಹೆಸರು ಈ ಹಿಂದಿನಿಂದಲೂ ಈ ಕ್ಷೇತ್ರದಾದ್ಯಂತ ಕೇಳಿ ಬರುತ್ತಿತ್ತು. ಅದಕ್ಕೆ ಪೂರಕವೆಂಬಂತೆ ಮೀಸಲಾತಿ ಸಾಮಾನ್ಯ ಪ್ರಕಟಗೊಂಡಿರುವುದರಿಂದ ಬಿಜೆಪಿಯಿಂದ ಅವರೇ ಅಭ್ಯರ್ಥಿ ಎನ್ನುವ ಮಾತುಗಳು ಹೆಚ್ಚು ಪ್ರಚಾರದಲ್ಲಿದೆ.
ರಂಜಿತ್ ಪೂಜಾರಿಯವರ ಹೆಸರು ಕೇಳಿ ಬಂದಿತ್ತಾದರೂ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸಾಹ ತೋರಿರಲಿಲ್ಲ.
ಆಕಾಂಕ್ಷಿಗಳು ಹಲವರು ಇರಬಹುದಾದರೂ ಪ್ರಮುಖವಾಗಿ ಈ ಎರಡು ಹೆಸರು ಇದೀಗ ಹೆಚ್ಚು ಚಾಲ್ತಿಯಲ್ಲಿದೆ.
ಶಾಂತಿಪ್ರಸಾದ್ ಹೆಗ್ಡೆ ಅವರದ್ದು ಜಿಲ್ಲಾದ್ಯಂತ ಚಾಲ್ತಿಯಲ್ಲಿರುವ ಹೆಸರು.ಈ ಹಿಂದೆ ಕಾಂಗ್ರೆಸಿಗರಾಗಿ ಪಕ್ಷ ಸಂಘಟಿಸಿದ್ದ ಅವರು ಮತ್ತೆ ಬಿಜೆಪಿ ಸೇರಿದವರು. ಬಿಜೆಪಿಯಲ್ಲೂ ಜಿಲ್ಲಾ ಮಟ್ಟದ ಪದಾಧಿಕಾರಿಯಾಗಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು.
ಪಕ್ಷ ಸಂಘಟನೆ ಹೊರತಾಗಿ ರೈತ ಸಂಘಟನೆಯಲ್ಲಿ ಹೆಚ್ಚು ಸದ್ದು ಮಾಡಿದವರು.ಈಗಲೂ ಒಮ್ಮೆಗೆ ಒಂದು ಮೆಸೇಜ್ ಮೂಲಕ ಐದು ಸಾವಿರದಷ್ಟು ಜನರನ್ನು ಸೇರಿಸುವ ತಾಕತ್ತು ಅವರಲ್ಲಿದೆ.ಹಲವು ರೈತಪರ ಚಳವಳಿಗಳ ಮೂಲಕ ಗಮನಸೆಳೆದಿರುವ ಶಾಂತಿಪ್ರಸಾದ್ ಹೆಗ್ಡೆಯವರ ಬಗ್ಗೆ ಕ್ಷೇತ್ರದ ಜನರಿಗೇ ಗೊತ್ತಿದೆ. ಹಾಗಾಗಿ ಅವರಿಗೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದರೆ ಅಚ್ಚರಿಯಿಲ್ಲ.
ಕಾಂಗ್ರೆಸ್ ನಿಂದ ಚಂದ್ರಹಾಸ ಸನಿಲ್ ಅವರ ಹೆಸರೂ ಇದೆ.ಯಾರಿಗೆ ಅವಕಾಶ ಸಿಗುತ್ತದೆ ಎನ್ನುವುದೇ ಸದ್ಯದ ಕುತೂಹಲ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top