ಮೂಡುಬಿದಿರೆ ಮೂಲದ ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ ಅವರನ್ನು ಬಿಎಂಟಿಸಿ ಸುರಕ್ಷತೆ ಹಾಗೂ ಜಾಗೃತ ವಿಭಾಗದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರಿನ ಸಿಟಿ ಕ್ರೈಮ್ ಬ್ರಾಂಚ್ ಡಿಸಿಪಿಯಾಗಿದ್ದ ಅಹದ್ ಅವರು ಈ ಹಿಂದೆ ಕರಾವಳಿ ಕಾವಲುಪಡೆಯ ಎಸ್ಪಿಯಾಗಿ, ಬೆಂಗಳೂರು ವೈಟ್ ಫೀಲ್ಡ್ ಡಿಸಿಪಿಯಾಗಿ, ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಯ ಬೆಂಗಳೂರು ಎಸ್ಪಿಯಾಗಿ, ಸಿ.ಐ.ಡಿ.ಯಲ್ಲಿ ಆರ್ಥಿಕ ಅಪರಾಧಗಳ ವಿಭಾಗದ ಎಸ್ಪಿಯಾಗಿ ಹಾಗೂ ಕೆ.ಎಸ್.ಆರ್.ಪಿ.ಯಲ್ಲಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದಾರೆ.
ಅಹದ್ ಅವರು ಮೂಡುಬಿದಿರೆ ಪುತ್ತಿಗೆಯವರಾಗಿದ್ದಾರೆ.
