ಹರೀಶ್ ಕಡಂದಲೆ. ತನ್ನ ಸಪೂರ ಶರೀರದ ಮೂಲಕ ತುಳು ರಂಗಭೂಮಿಯಲ್ಲಿ ತನ್ನದೇ ಆದ ಹೆಸರುಗಳಿಸಿಕೊಂಡಿರುವ ಬಡ ಕಲಾವಿದ.
ಉಮೇಶ್ ಮಿಜಾರ್ (ಚೋಟು) ಅವರ ನಮ್ಮ ಕಲಾವಿದೆರ್ ಬೆದ್ರ ತಂಡದಲ್ಲಿ ಕಳೆದ ಹಲವು ವರ್ಷಗಳಿಂದ ಖಾಯಂ ಸದಸ್ಯನಾಗಿ ಹಲವು ನಾಟಕಗಳಲ್ಲಿ ಬೇರೆ ಬೇರೆ ಪಾತ್ರಗಳ ಮೂಲಕ ಉಭಯ ಜಿಲ್ಲೆಯಲ್ಲಿ ಗಮನಸೆಳೆದವರು. ಚಲನಚಿತ್ರಗಳಲ್ಲೂ ನಟಿಸಿರುವ ನಮ್ಮೂರ ಪ್ರತಿಭೆ.
ಇಂತಹ ಬಡ ಕಲಾವಿದ ಹರೀಶ್ ಅವರು ಇದೀಗ ಹೃದಯ ಸಂಬಂಧಿ ಕಾಯಿಲೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ.ಮನೆಯಲ್ಲೂ ಆರ್ಥಿಕವಾಗಿ ಗಟ್ಟಿಯಾಗಿರದ ಕುಟುಂಬ.ಹಾಗಾಗಿ ಚಿಕಿತ್ಸೆಗೆ ಮತ್ತು ಆ ನಂತರದ ಮದ್ದಿಗೆ ಎಂದು ದೊಡ್ಡ ವೆಚ್ಚ ತಗಲುತ್ತದೆ. ಕಲಾಭಿಮಾನಿಗಳು,ಸಹೃದಯಿ ದಾನಿಗಳು ಈ ಬಡ ಕಲಾವಿದನ ಮೇಲೆ ಕರುಣೆ ತೋರಿ ತಮ್ಮಲ್ಲಾದ ಆರ್ಥಿಕ ನೆರವು ನೀಡಿ ಸಹಕರಿಸಬೇಕಾದ ಅಗತ್ಯವಿದೆ.ಅವರ ಬ್ಯಾಂಕ್ ಖಾತೆ ಕೆಳಗೆ ನೀಡಲಾಗಿದೆ.
