ದ.ಕ.ಖಾಝಿಯಾಗಿರುವ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರನ್ನು ಸಚ್ಚರಿಪೇಟೆ ಜಮಾತ್ ಗೆ ನೂತನ ಖಾಝಿಯನ್ನಾಗಿ ಸ್ವೀಕರಿಸುವ ಸಮಾರಂಭವು ನಾಳೆ ಜುಮ್ಮಾ ನಮಾಝ್ ಬಳಿಕ ಸಚ್ಚರಿಪೇಟೆ ಮದೀನಾ ಮಸೀದಿಯಲ್ಲಿ ನಡೆಯಲಿದೆ ಎಂದು ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ರಝಾಕ್ ಸಚ್ಚರಿಪೇಟೆ ಅವರು ತಿಳಿಸಿದ್ದಾರೆ.
ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಅವರು ಖಾಝಿ ಪಟ್ಟ ನೀಡಲಿದ್ದು ಮೂಡುಬಿದಿರೆ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಫೈಝಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ಉದ್ಯಮಿಗಳಾದ ಅಬ್ದುಸ್ಸಲಾಂ ಬೂಟ್ ಬಝಾರ್, ಉಸ್ಮಾನ್ ಹಾಜಿ ದುಗ್ಗೋಡಿ ಮತ್ತಿತರರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
