Latest News

ಕೋಟೆಬಾಗಿಲಿನಲ್ಲಿ ಬೃಹತ್ ವೈದ್ಯಕೀಯ ಶಿಬಿರ

Picture of Namma Bedra

Namma Bedra

Bureau Report

ಯೆನಪೋಯ ಆಸ್ಪತ್ರೆ, ದಿ ಹ್ಯುಮನ್, ಈದ್ಗಾ ಫ್ರೆಂಡ್ಸ್, ಅಲ್ ಅಮೀನ್ ಹೆಲ್ಪ್ ಲೈನ್ ಮತ್ತು ಅಂಜುಮಾನ್ ಚಮನ್ಶಾ ಸಮಿತಿ ಇವುಗಳ ಜಂಟಿ ನೇತೃತ್ವದಲ್ಲಿ ಇತ್ತೀಚೆಗೆ ಮೊಹಮ್ಮದೀಯ ಆಂಗ್ಲ ಮಾಧ್ಯಮ ಶಾಲೆ ಕೋಟೆಬಾಗಿಲು ಮೂಡಬಿದ್ರೆ ಇಲ್ಲಿ ಉಚಿತ ವೈಧ್ಯಕೀಯ ಶಿಬಿರ ಹಾಗೂ ಕಿಡ್ನಿ ವೈಫಲ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.


ಈ ಕಾರ್ಯಕ್ರಮದಲ್ಲಿ ದಂತ ಚಿಕಿತ್ಸೆ, ಕಣ್ಣು ತಪಾಸಣೆ, ಕ್ಯಾನ್ಸರ್ ಪರೀಕ್ಷೆ, ಸ್ತ್ರೀ ರೋಗ ವಿಭಾಗ, ಕಿಡ್ನಿ ತಪಾಸಣೆ, ರಕ್ತದ ಒತ್ತಡ ಪರೀಕ್ಷೆ, ಸಕ್ಕರೆ ಪರೀಕ್ಷೆ ಮತ್ತು ಇತರ ಸಾಮಾನ್ಯ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಯಿತು. ಕಿಡ್ನಿ ವೈಫಲ್ಯದ ಜಾಗೃತಿ ಬಗ್ಗೆ ಖ್ಯಾತ ವೈಧ್ಯ ಭೂಷಣ್ ಶೆಟ್ಟಿ ಮಾತನಾಡಿದರು. ದಂತದ ಬಗ್ಗೆ ಡಾ ಅಝೀಝ್ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ಸಾಧನೆ ಮಾಡಿರುವ ಆಸಿಫ್ ಡೀಲ್ಸ್ ಹಾಗೂ ಶಿಕ್ಷಣ ಮತ್ತು ಧಾರ್ಮಿಕ ಸೇವೆಯನ್ನು ಮಾಡುತ್ತಿರುವ ಪಾರ್ಕರ್ ಮಹಮ್ಮದ್ ಶರೀಫ್ ಇವರಿಗೆ ಸನ್ಮಾನ ಮಾಡಲಾಯಿತು.


ಕಾರ್ಯಕ್ರಮವನ್ನು ಮೌಲಾನಾ ಮುಹಮ್ಮದ್ ಅಸ್ಲಂ ದುವಾ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶರೀಫ್ ಬೋಲಾರ್ (ವೈಟ್ ಸ್ಟೋನ್), ಕಿಡ್ನಿ ತಜ್ಞ ಡಾ ಭೂಷನ್ ಶೆಟ್ಟಿ, ಸರಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ ಅಕ್ಷತಾ ನಾಯಕ್, ಬಿ ಹ್ಯುಮನ್ ಸಂಸ್ಥಾಪಕ ಆಸಿಫ್ ಡೀಲ್ಸ್, ಖಿಲ್ಲಾ ಜಾಮಿಯ ಮಸೀದಿ ಅಧ್ಯಕ್ಷ ಪಾರ್ಕರ್ ಮಹಮ್ಮದ್ ಷರೀಫ್, ಈದ್ಗಾ ಮದರಸ ಅಧ್ಯಕ್ಷ ಮುಹಮ್ಮದ್ ಹನೀಫ್, ಸಿ ಎ ಬ್ಯಾಂಕ್ ಮಾಜಿ ಮ್ಯಾನೇಜರ್ ಮುಹಮ್ಮದ್ ವೇಣೂರು, ಅಲ್ ಅಮೀನ್ ಹೆಲ್ಪ್ ಲೈನ್ ನ ಅಝ್ವೀರ್ ಅಝ್ಕ, ಪುರಸಭಾ ಸದಸ್ಯ ಹಿಮಾಯತ್ ಶೇಕ್, ದಂತ ವೈಧ್ಯ ಡಾ ಅಝೀಝ್, ಯಾಸೀರ್ ಹುಸೇನ್, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬ್ದುಲ್ ಸಲಾಂ, ರಝಾಕ್ ಸಚ್ಚೇರಿಪೇಟೆ, ಅಲ್ ಬಿರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಸ್ಮಾನ್ ಸೂರಿಂಜೆ, ಲಕ್ಸುರಿ ಲಿವಿಂಗ್ ಮುಖ್ಯಸ್ಥ ಬದ್ರುದ್ದೀನ್, ಉಧ್ಯಮಿ ಅಬುಲ್ ಅಲಾ, ಬಿ ಹ್ಯುಮನ್ ನ ಬೆಳ್ಳೆಚ್ಚಾರ್ ಮುಹಮ್ಮದ್, ಮಾಜಿ ಪುರಸಭಾ ಸದಸ್ಯ ಬಶೀರ್, ಅಶ್ರಫ್ ಮರೋಡಿ, ಹನೀಫ್ ತೋಡಾರು ಹಾಗೂ ಇತರರು ಭಾಗವಹಿಸಿದರು.
ವಕೀಲರಾದ ಎನ್ ಜಿ ಇರ್ಷಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು, ಕೆ ಎಸ್ ಅಬೂಬಕ್ಕರ್ ಸ್ವಾಗತಿಸಿದರು. ಸುಮಾರು 150 ಕ್ಕೂ ಅಧಿಕ ಜನ ಶಿಬಿರದ ಪ್ರಯೋಜನ ಪಡೆದುಕೊಂಡರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು