ಸಚ್ಚರಿಪೇಟೆ ಮದೀನಾ ಮಸೀದಿಗೊಳಪಟ್ಟ ಜಮಾತ್ ನ ನೂತನ ಖಾಝಿಯಾಗಿ ದ.ಕ.ಖಾಝಿಯವರಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಶುಕ್ರವಾರ ಜುಮ್ಮಾ ನಮಾಝ್ ಬಳಿಕ ಅಧಿಕಾರ ಸ್ವೀಕರಿಸಿದರು.
ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅವರು ತ್ವಾಖಾ ಉಸ್ತಾದ್ ಅವರಿಗೆ ಖಾಝಿ ಪಟ್ಟ ನೀಡಿದರು.

ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್ ಸಚ್ಚರಿಪೇಟೆ, ಗೌರವಾಧ್ಯಕ್ಷ ಪುತ್ತುಮೋನು, ಮೂಡುಬಿದಿರೆ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಫೈಝಿ, ಆಡಳಿತ ಕಮಿಟಿ ಅಧ್ಯಕ್ಷ ಅಬ್ದುರ್ರಹ್ಮಾನ್ (ಅಬ್ಬಾಕ), ಶಾಬಾನ್ ಸಚ್ಚರಿಪೇಟೆ, ಫಕೀರಬ್ಬ ಮಾಸ್ಟರ್, ಡಿ.ಎ.ಉಸ್ಮಾನ್ ಏರ್ ಇಂಡಿಯಾ, ಅಬ್ದುಸ್ಸಲಾಮ್ ಬೂಟ್ ಬಝಾರ್,ಮಯ್ಯದ್ದಿ ಗುಂಡುಕಲ್ಲು,ಅಬುಲಾಲ್ ಪುತ್ತಿಗೆ, ಅಬ್ದುಲ್ ಖಾದರ್,ಉಸ್ಮಾನ್ ಸೂರಿಂಜೆ,ಮಾಲಿಕ್ ಅಝೀಝ್, ಫಾಯಿಝ್ ಫೈಝಿ ಲಾಡಿ,ರಮ್ಲಾನ್,ಹನೀಫ್ ಹಾಜಿ,ಅಹ್ಮದ್ ಹುಸೈನ್ ಗಂಟಾಲ್ಕಟ್ಟೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಸೀದಿಯ ಖತೀಬರಾದ ಶಾಫಿ ಫೈಝಿ ಸ್ವಾಗತಿಸಿ ಮಜೀದ್ ಅವರು ಖಾಝಿಯವರನ್ನು ಪರಿಚಯಿಸಿದರು. ಕಾರ್ಯದರ್ಶಿ ಮುಹಮ್ಮದ್ ಹನೀಫ್ ವಂದಿಸಿದರು.