ಪುಣೆಯ ಖ್ಯಾತ ಮಕ್ಕಳ ತಜ್ಞ, ಮೂಡುಬಿದಿರೆ ಮೂಲದ ಡಾ.ಸುಧಾಕರ ಶೆಟ್ಟಿ ಅವರು ಆಳ್ವಾಸ್ ಸೆಮಿನಾರ್ ಹಾಲ್ ನಲ್ಲಿ ‘ಮಕ್ಕಳ ಅಭ್ಯಾಸದಲ್ಲಿ ನೈತಿಕ ಮಾರ್ಗ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
200 ಮಂದಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಪ್ರತೀ ಎರಡು ತಿಂಗಳಿಗೊಮ್ಮೆ ಪುಣೆಯಿಂದ ಮೂಡುಬಿದಿರೆಗೆ ಬಂದು ಮೂಡುಬಿದಿರೆಯ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಸಂಚಾರಿ ಕ್ಲಿನಿಕನ್ನು ನಡೆಸುತ್ತಾ ಬಂದಿರುವ ಡಾ.ಸುಧಾಕರ ಶೆಟ್ಟಿ ಅವರು ಆಳ್ವಾಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಕ್ಕಳ ವೈದ್ಯಕೀಯದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಿದ್ದಾರೆ.
