ಮೂಡುಬಿದಿರೆ ಸಮೀಪದ ಸಂಪಿಗೆಯ ಪ್ರಶಾಂತ ವಾತಾವರಣದಲ್ಲಿ, ವಿಶಾಲವಾದ ಪ್ರದೇಶದಲ್ಲಿ, ಸಕಲ ಸೌಲಭ್ಯಗಳೊಂದಿಗೆ ಅತ್ಯಾಕರ್ಷಕ ಶೈಲಿಯಲ್ಲಿ ನಿರ್ಮಿಸಲಾಗಿರುವ ‘ ಸಂಪಿಗೆ ರೆಸಾರ್ಟ್’ ಡಿ.18 ರ ಬುಧವಾರ ಬೆಳಿಗ್ಗೆ 10-30 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರವರ್ತಕ, ಪುಣೆಯ ಅತಿಥಿ ಗ್ರೂಪ್ ಆಫ್ ರೆಸ್ಟಾರೆಂಟ್ ಮಾಲಕ, ಮಾರೂರಿನ ಪ್ರವೀಣ್ ಶೆಟ್ಟಿ ಹಾಗೂ ಪುಣೆಯ ಬೇಬಿ ಫ್ರೆಂಡ್ ಕ್ಲಿನಿಕ್ ನ ಡಾ.ಸುಧಾಕರ ಶೆಟ್ಟಿ ಅವರು ತಿಳಿಸಿದ್ದಾರೆ.


ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಅವರು ರೆಸಾರ್ಟನ್ನು ಉದ್ಘಾಟಿಸಲಿದ್ದಾರೆ. ಅದಕ್ಕೂ ಮುನ್ನ ಸತ್ಯನಾರಾಯಣ ಪೂಜೆ ನಡೆಯಲಿದೆ.


ಸಂಸದ ಬ್ರಿಜೇಶ್ ಚೌಟ,ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ,ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್,ಕೆ.ಪಿ.ಸಿ.ಸಿ.ಕಾರ್ಯದರ್ಶಿ ಮಿಥುನ್ ರೈ ಹಾಗೂ ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಚೌಟರ ಅರಮನೆಯ ಕುಲದೀಪ್ ಎಂ, ಪಂಚರತ್ನ ಇಂಟರ್ನ್ಯಾಷನಲ್ ನ ತಿಮ್ಮಯ್ಯ ಶೆಟ್ಟಿ,ಉದ್ಯಮಿಗಳಾದ ಶ್ರೀಪತಿ ಭಟ್,ನಾರಾಯಣ ಪಿ.ಎಂ, ಶ್ರೀಧರ ಆಚಾರ್ಯ,ಜಯಶ್ರೀ ಅಮರನಾಥ ಶೆಟ್ಟಿ,ರಾಮಚಂದ್ರ ಆಳ್ವ ಮಿಜಾರ್,ಪುರುಷೋತ್ತಮ ಶೆಟ್ಟಿ,ರವೀಂದ್ರ ಶೆಟ್ಟಿ ಮಂಗಳೂರು, ಗಜಾನನ ಪೂಂಜ ಮಂಗಳೂರು ಹಾಗೂ ಪುರುಷೋತ್ತಮ ಶೆಟ್ಟಿ ಉಡುಪಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

