Latest News

ಕೆ.ಎಸ್.ಆರ್.ಟಿ.ಸಿ.ಬಸ್: ಅಭಿನಂದಿಸಬೇಕಿರುವುದು ಸರಕಾರ ಮತ್ತು ಅರುಣ್ ಕುಮಾರ್ ಶೆಟ್ಟಿ ಅವರನ್ನು!

Picture of Namma Bedra

Namma Bedra

Bureau Report

ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಲ್ಲೊಂದಾಗಿರುವ ಶಕ್ತಿ ಯೋಜನೆಯಡಿ ಮಂಗಳೂರು-ಮೂಡುಬಿದಿರೆ-ಕಾರ್ಕಳ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ಸಂಚಾರಕ್ಕೆ ಕೊನೆಗೂ ಅನುಮೋದನೆ ಲಭಿಸಿದೆ.ಈ ಮೂಲಕ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ,ಸಾರ್ವಜನಿಕರಿಗೆ ಈ ಯೋಜನೆಯಿಂದಾಗಿ ಕುಷಿಯಾಗಿದೆ.
ಈ ಪ್ರಸ್ತಾಪ ಸರಕಾರ ಅಧಿಕಾರಕ್ಕೆ ಬಂದು ಪಂಚಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಾಗಲೇ ಇತ್ತು. ಆದರೆ ಮಧ್ಯೆ ಯಾಕೋ ಬಸ್ ವೇಗಕ್ಕೆ ಬ್ರೇಕ್ ಬಿದ್ದಂತಾಗಿತ್ತು.
ಇದರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಮಂಗಳೂರಿನಲ್ಲಿ ಜಿಲ್ಲಾಧಿಕಾರಿ , ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ,ಜಿಲ್ಲಾಧ್ಯಕ್ಷ,ಇತರ ತಾಲೂಕು ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಿ ಗಮನಸೆಳೆದಿದ್ದರು. ಕೆಲವರಿಗೆ ಇದರಿಂದ ‘ ಬೆಚ್ಚ’ ಆದದ್ದೂ ಇದೆ.ಆದರೆ ನಂತರ ನಡೆದ ಪ್ರತೀ ಸಭೆಗಳಲ್ಲೂ ,ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದ್ದರು. ಅಲ್ಲದೆ ವಿದ್ಯಾರ್ಥಿಗಳ, ಮಹಿಳೆಯರ, ಸಾರ್ವಜನಿಕರ ಬೇಡಿಕೆ ಕೂಡಾ ಹೆಚ್ಚು ಇತ್ತು.
ಇದನ್ನೆಲ್ಲಾ ಗಮನಿಸಿದ ಕೆ.ಎಸ್.ಆರ್.ಟಿ.ಸಿ.ಮಂಗಳೂರು ವಿಭಾಗ ಬೆಂಗಳೂರಿನ ಮುಖ್ಯ ಕಚೇರಿಗೆ ಪತ್ರವನ್ನೂ ಬರೆದಿತ್ತು.ಈ ರಸ್ತೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಬೇಡಿಕೆ ಹೆಚ್ಚಿರುವುದರಿಂದ ಸರಕಾರ ಕೂಡಾ ಅನುಮೋದನೆ ನೀಡಿದೆ.
ಇಷ್ಟೆಲ್ಲಾ ನಡೆದ ಬೆಳವಣಿಗೆಗಳು.ಆದರೆ ಬಸ್ ಓಡಾಟಕ್ಕೆ ದಿನ ಸಮೀಪಿಸುತ್ತಿರುವಂತೆ ಕೆಲವರು ಇನ್ನಾರದ್ದೋ ಸಾಧನೆ ಎಂಬಂತೆ ಬಿಂಬಿಸಲು ಹೊರಟಿದ್ದಾರೆ.ನಿಜವಾಗಿಯೂ ಅಭಿನಂದನೆ ಸಲ್ಲಬೇಕಿರುವುದು ಸರಕಾರ ಮತ್ತು ಅರುಣ್ ಕುಮಾರ್ ಶೆಟ್ಟಿ ಅವರಿಗೇ ವಿನಹ ಬೇರಾರಿಗೂ ಅಲ್ಲ.
ನಮ್ಮಬೆದ್ರ ಎರಡು ಮೂರು ದಿನಗಳ ಹಿಂದೊಮ್ಮೆ ” ಈ ಅರುಣನಿಗಿರುವ ಆಸಕ್ತಿ ಬೇರೆಯವರಿಗೇಕಿಲ್ಲ” ಎಂದು ಪ್ರಶ್ನಿಸಿ ವರದಿ ಪ್ರಕಟಿಸಿತ್ತು.ಅರ್ಥ ಆಗುವವರಿಗೆ ಆ ವರದಿ ಅರ್ಥವಾಗುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು