ಈ ಭಾಗದ ಬಹುಕಾಲದ ಬೇಡಿಕೆಯಾಗಿದ್ದ ಸರಕಾರಿ ಬಸ್ ಸೇವೆ ಗುರುವಾರದಿಂದ ಪ್ರಾರಂಭಗೊಂಡಿದೆ.ಯಾರ ಪ್ರಯತ್ನದ ಫಲ ಎನ್ನುವುದು ಇಲ್ಲಿ ಬೇಡ.ಅದೆಲ್ಲರಿಗೂ ಗೊತ್ತಿರುವ ವಿಷಯವೇ.
ಸರಕಾರಿ ಬಸ್ ಸೇವೆ ಪ್ರಾರಂಭವಾದ ಕೂಡಲೇ ಯಾತ್ರಿನಿವಾಸವೂ ಪ್ರಾರಂಭಗೊಂಡಿದೆ.
ಪ್ರಯಾಣಿಕರಿಗೆ ಅನುಕೂಲವಾಗುವಂತೆ ಲಗ್ಗೇಜ್ ರೂಮ್,ಫ್ರಶ್ಶಪ್,ರೆಸ್ಟ್ ರೂಮ್ ಹೀಗೆ ಪ್ರಯಾಣಿಕರಿಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ.
ಮೂಡುಬಿದಿರೆಯ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಬಳಿ ಈ ವ್ಯವಸ್ಥೆಯನ್ನು ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ಅವರು ಮಾಡಿದ್ದಾರೆ.
