ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಗೊಳಪಡುವ ಉಚ್ಚ ನ್ಯಾಯಾಲಯ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪನೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಆಗ್ರಹಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು ‘ ಕರಾವಳಿ ಭಾಗದಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಕೇಸ್ ಗಳು ಬಾಕಿ ಇದೆ,ಉಳಿದ ಜಿಲ್ಲೆಗಳ ಕೇಸ್ ಗಳೂ ಬಾಕಿ ಇದೆ,ಸುಮಾರು 400 ಕಿ.ಮೀ.ದೂರದಲ್ಲಿರುವ ಬೆಂಗಳೂರಿಗೆ ಜನರು ಹೋಗಬೇಕಾಗುತ್ತದೆ,ಜನರಿಗೆ ತ್ವರಿತವಾಗಿ ಮತ್ತು ಕಡಿಮೆ ಖರ್ಚಲ್ಲಿ ನ್ಯಾಯ ಸಿಗಬೇಕಾದರೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಲೇಬೇಕು’ ಎಂದವರು ಒತ್ತಾಯಿಸಿದರು.
ಈಗಾಗಲೇ ಗುಲ್ಬರ್ಗ ಮತ್ತು ಧಾರವಾಡದಲ್ಲಿ ಹೈಕೋರ್ಟ್ ಪೀಠ ಇದೆ,ಅಲ್ಲಿನ ಕೇಸ್ ಗಳಿಗೆ ತುಲನೆ ಮಾಡಿದರೆ ನಮ್ಮ ಈ ಐದು ಜಿಲ್ಲೆಗಳಲ್ಲಿನ ಕೇಸ್ ಗಳೇ ಜಾಸ್ತಿ, ಸುಪ್ರೀಂ ಕೋರ್ಟ್ ಕೂಡಾ ಬೇರೆ ಬೇರೆ ರಾಜ್ಯಗಳಲ್ಲಿ ಸುಪ್ರೀಂ ಪೀಠ ಸ್ಥಾಪನೆಗೆ ಹೇಳಿರುವಂತೆ ನಮ್ಮ ಈ ಐದು ಜಿಲ್ಲೆಗಳ ವ್ಯಾಪ್ತಿಗೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠದ ಅತ್ಯಗತ್ಯವಿದೆ ಎಂದವರು ಆಗ್ರಹಿಸಿದ್ದಾರೆ.