ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬೆಳ್ತಂಗಡಿ ಇದರ ಸಹಯೋಗದಲ್ಲಿ ಕಾಶಿಪಟ್ಣ ದಾರುನ್ನೂರ್ ಎಜುಕೇಶನ್ ಸೆಂಟರ್ ಆಯೋಜಿಸಿದ್ದ ಬಜಿರೆ,ನಿಟ್ಟಡೆ ಹಾಗೂ ಪಡ್ಡಂದಡ್ಕ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ದಾರುನ್ನೂರ್ ಕಾಶಿಪಟ್ಣ ಪ್ರಥಮ ಸ್ಥಾನ ಪಡೆದಿದೆ.
ಬಾಲಕಿಯರ ವಿಭಾಗದಲ್ಲಿ ನವಚೇತನಾ ವೇಣೂರು ಚಾಂಪಿಯನ್ ಹಾಗೂ ರನ್ನರ್ ಅಪ್ ಪ್ರಶಸ್ತಿಯನ್ನು ಕ್ರಮವಾಗಿ ವಿದ್ಯೋದಯ ವೇಣೂರು ಹಾಗೂ ಸ.ಉ.ಪ್ರಾ.ಶಾಲೆ,ಹೊಕ್ಕಾಡಿಗೋಳಿ ಪಡೆದುಕೊಂಡಿದೆ.
ದಾರುನ್ನೂರ್ ಸಂಸ್ಥೆಯ ಮೈದಾನದಲ್ಲಿ ನಡೆದ ಈ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಕಾಶಿಪಟ್ಣ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಆಶಾಲತಾ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಫಕೀರಬ್ಬ ಮಾಸ್ಟರ್, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಆರತಿ,ಸಂಸ್ಥೆಯ ಉಪಪ್ರಾಂಶುಪಾಲರಾದ ಶಮೀಮ್ ಹುದವಿ,ತುಂಬೆ,ಮುಖ್ಯೋಪಾಧ್ಯಾಯರಾದ ಮುಹಮ್ಮದ್ ಅನ್ವರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ವ್ಯವಸ್ಥಾಪಕರಾದ ಅಬ್ದುಲ್ ಹಕೀಮ್ ಸ್ವಾಗತಿಸಿ ಸಹಶಿಕ್ಷಕರಾದ ಮುಹಮ್ಮದ್ ನೌಶಾದ್ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಸಂಸ್ಥೆಯ ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸದರ್ ಮುದರ್ರಿಸ್ ಹುಸೈನ್ ರಹ್ಮಾನಿ ಖಾಝಿಯಾರಗಂ ಅಧ್ಯಕ್ಷತೆ ವಹಿಸಿದ್ದರು.
ನಿಟ್ಟಡೆ ಮತ್ತು ಪಡ್ಡಂದಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಆರತಿ,ವಲಯ ನೋಡೆಲ್ ಅಧಿಕಾರಿ ಪುಷ್ಪಾ ,ಸಂಸ್ಥೆಯ ಪ್ರಾಂಶುಪಾಲರಾದ ರಶೀದ್ ಹುದವಿ ಮೂಡಿಗೆರೆ,ದ.ಕ.ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಕೋಶಾಧಿಕಾರಿ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಮುಹಮ್ಮದ್ ಅನ್ವರ್ ಸ್ವಾಗತಿಸಿ ಸಹಶಿಕ್ಷಕ ಮುಹಮ್ಮದ್ ಅಕ್ರಮ್ ವಂದಿಸಿದರು.






