ಪಡುಮಾರ್ನಾಡು: ಬಾವಿಗೆ ಬಿದ್ದು ಯುವಕ ಮೃತ್ಯು

Picture of Namma Bedra

Namma Bedra

Bureau Report

ಆವರಣಗೋಡೆ ಇಲ್ಲದ ಬಾವಿಗೆ ಆಯತಪ್ಪಿ ಬಿದ್ದ ಯುವಕನೋರ್ವ ಮೃತಪಟ್ಟ ಘಟನೆ ಪಡುಮಾರ್ನಾಡು ಸಮೀಪ ನಡೆದಿದೆ.
ಪಡುಮಾರ್ನಾಡು ಮುನ್ನೇರು ನಿವಾಸಿ ಬಾಲಕೃಷ್ಣ ಶೆಟ್ಟಿ ( 38) ಮೃತಪಟ್ಟ ಯುವಕ.
ಪಡುಮಾರ್ನಾಡಿನ ಮೊಡಂದೇಲ್ ಎಂಬಲ್ಲಿ ಈ ಘಟನೆ ನಡೆದಿದೆ.


ಎರಡು ದಿನದ ಹಿಂದೆ ಈ ಪರಿಸರದಲ್ಲಿ ಕಾರ್ಯಕ್ರಮವೊಂದು ನಡೆದಿದ್ದು ಆ ಕಾರ್ಯಕ್ರಮದಲ್ಲಿ ಈ ಯುವಕ ಭಾಗವಹಿಸಿದ್ದು ‌ಬಾವಿಗೆ ಆವರಣಗೋಡೆ ಇಲ್ಲದಿರುವುದು ಗಮನಕ್ಕೆ ಬಾರದೆ ಆಯತಪ್ಪಿ ಬಾವಿಗೆ ಬಿದ್ದಿದ್ದಾನೆನ್ನಲಾಗಿದೆ.
ಎರಡು ದಿನ ಕಳೆದು ಅಂದರೆ ಇಂದು ( ಗುರುವಾರ) ಮೃತದೇಹ ಪತ್ತೆಯಾಗಿದ್ದು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top