ಕೆಪಿಸಿಸಿ ಕಾರ್ಯದರ್ಶಿ,ಯುವನಾಯಕ ಮಿಥುನ್ ರೈ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಶ್ರಮಿಸುತ್ತಿರುವ ಅವರು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಸೋತರೂ ತನ್ನ ನೆಚ್ಚಿನ ಕ್ಷೇತ್ರವನ್ನು ಬಿಡದ ಅವರು ಕಾರ್ಯಕರ್ತರ ಭೇಟಿಗಾಗಿ ಕಿನ್ನಿಗೋಳಿ ಮತ್ತು ಮೂಡುಬಿದಿರೆಯಲ್ಲಿ ವಾರಕ್ಕೊಮ್ಮೆ ಲಭ್ಯರಿರುತ್ತಾರೆ.
ಮಧ್ಯದಲ್ಲೊಮ್ಮೆ ಮೂಡುಬಿದಿರೆಗೆ ಬಾರದೆ ಇದ್ದುದರಿಂದ ಕೆಲವೊಂದು ಆಪಾದನೆಗಳು ಕೇಳಿಬಂದಿತ್ತು.ಆದರೆ ‘ ತಾನೆಂದಿಗೂ ಮೂಡುಬಿದಿರೆ ಕ್ಷೇತ್ರವನ್ನು ಬಿಡುವ ಪ್ರಶ್ನೆಯೇ ಇಲ್ಲ’ ಎಂಬುದಾಗಿ ಹೇಳಿಕೆ ನೀಡುವ ಮೂಲಕ ಮತ್ತೆ ಎಂಟ್ರಿಯಾಗಿ ಕಾರ್ಯಕರ್ತರಲ್ಲಿ ,ಪಕ್ಷದ ಪ್ರಮುಖರಲ್ಲಿ ವಿಶ್ವಾಸ ಹೆಚ್ಚಿಸಿದ್ದಾರೆ.
ಇದೀಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಾದಿಗೆ ಚುನಾವಣೆಯ ಸಿದ್ಧತೆ ನಡೆಯುತ್ತಿದೆ.ಹಲವು ಹೆಸರುಗಳು ಮುಂಚೂಣಿಯಲ್ಲಿದೆಯಾದರೂ ಮಿಥುನ್ ರೈ ಅವರ ಹೆಸರೇ ಪ್ರಮುಖವಾಗಿ ಕೇಳಿ ಬರುತ್ತಿದೆ. ಐವತ್ತರೊಳಗಿನ ಯುವಕರಿಗೆ ಜಿಲ್ಲಾಧ್ಯಕ್ಷ ಜವಾಬ್ದಾರಿ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಹೇಳಿರುವುದೂ, ಮಿಥುನ್ ರೈ ಐವತ್ತರೊಳಗಿನವರಾಗಿರುವುದೂ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿ.ಅವರ ಕಟ್ಟಾ ಶಿಷ್ಯ ಎಂದೇ ಖ್ಯಾತರಾಗಿರುವುದು ಕೂಡಾ ಅವರೇ ಅಧ್ಯಕ್ಷರಾಗಲಿದ್ದಾರೆ ಎನ್ನುವುದಕ್ಕೆ ಹೆಚ್ಚು ಪುಷ್ಠಿ ನೀಡುತ್ತಿದೆ.







