ಮೂಡುಬಿದಿರೆಯ ಎಂ.ಸಿ.ಎಸ್.ಬ್ಯಾಂಕ್ ವತಿಯಿಂದ ನೀಡಲಾಗುವ ‘ ಸಮಗ್ರ ಸಾಧಕ ‘ ಪ್ರಶಸ್ತಿಗೆ ಉದ್ಯಮಿ, ಪದ್ಮಶ್ರೀ ಏಜೆನ್ಸೀಸ್ ನ ಮಾಲಕರಾದ ಅಭಿಜಿತ್ ಎಂ.ಅವರು ಆಯ್ಕೆಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮೂಡುಬಿದಿರೆಯಲ್ಲಿ ಉದ್ಯಮಿಯಾಗಿ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಅಭಿಜಿತ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಮೂಡುಬಿದಿರೆ ಜನತೆಗೆ ಸಂತಸ ಉಂಟುಮಾಡಿದೆ.
ಮುಂಬರುವ ಸಹಕಾರ ಸಪ್ತಾಹದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.






