ವರ್ಲ್ಡ್ ಸ್ಕೂಲ್ ಗೇಮ್ಸ್ ಫೆಡರೇಶನ್ ವತಿಯಿಂದ ಚೀನಾದಲ್ಲಿ ನಡೆಯಲಿರುವ 15 ವರ್ಷ ಕೆಳಗಿನ ಭಾರತೀಯ ಮಹಿಳಾ ವಾಲಿಬಾಲ್ ತಂಡಕ್ಕೆ ಕಾರ್ಕಳದ ಶಗುನ್ ಎಸ್.ವರ್ಮಾ ಅವರು ಆಯ್ಕೆಯಾಗಿದ್ದಾರೆ.
ಭಾರತ ತಂಡವನ್ನು ಪ್ರತಿನಿಧಿಸುವ ಕರ್ನಾಟಕದ ಏಕೈಕ ಆಡಗಾರ್ತಿ ಎಂಬ ಹೆಗ್ಗಳಿಕೆ ಈಕೆಯದ್ದು.
ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಈಕೆ ಕಾರ್ಕಳ ಎಂ.ಎಂ.ಸಿ.ಡೆಕೋರೇಟರ್ಸ್ ನ ಮಾಲಕರಾದ ಸಂದೇಶ್ ವರ್ಮ- ಶೃತಿ ದಂಪತಿಯ ಪುತ್ರಿ.






