ಮೂಡುಬಿದಿರೆಯಲ್ಲಿ ಮತದಾನ ಗುರುತಿನ ಚೀಟಿ ಅಭಿಯಾನ

Picture of Namma Bedra

Namma Bedra

Bureau Report

ಮೂಡುಬಿದಿರೆ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಛಾಯಾ ಗ್ರಾಮ ಒನ್ ಸೇವಾ ಕೇಂದ್ರ ದ ವತಿಯಿಂದ ‘ ನಮ್ಮ ಮತ, ನಮ್ಮ ಹಕ್ಕು’ ಎಂಬ ಟೈಟಲ್ ನಡಿ ಮತದಾನ ಗುರುತಿನ ಚೀಟಿ ಅಭಿಯಾನ ಕಾರ್ಯಕ್ರಮವು ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪುರಸಭಾ ಹಿರಿಯ ಸದಸ್ಯ ಕೊರಗಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಮಾಜಿ ಸಚಿವ ಕೆ.ಅಭಯಚಂದ್ರ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ,ಮಹಿಳಾ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಕಾತ್ಯಾಯಿನಿ, ಪುರಸಭಾ ಸದಸ್ಯ ಪಿ.ಕೆ‌.ಥೋಮಸ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಸುಮಾರು 250 ಜನರು ಈ ಅಭಿಯಾನದ ಲಾಭವನ್ನು ಪಡೆದುಕೊಂಡರು.
ಛಾಯಾ ಸೇವಾಕೇಂದ್ರದ ಪ್ರಿಯಾ ಶೆಟ್ಟಿ, ರಕ್ಷಿತಾ, ಬುಶ್ರಾ, ಅನುಷಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶೇಖರ್ ಬೊಳ್ಳಿ, ಶೌಕತ್ ಬೆಳುವಾಯಿ, ಇಕ್ಬಾಲ್ ಕರೀಮ್, ಮಿತ್ತಬೈಲು ವಾಸುದೇವ ನಾಯಕ್,ಸುರೇಶ್ ಕೋಟ್ಯಾನ್, ಸಂತೋಷ್ ಶೆಟ್ಟಿ, ರಜನಿ,ಸರಸ್ವತಿ ಶೆಟ್ಟಿ,ಮುರಳೀಧರ ಕೋಟ್ಯಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಮೇಶ್ ಶೆಟ್ಟಿ ಪಡುಮಾರ್ನಾಡು ಅವರು ಸ್ವಾಗತಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top