ಮೂಡುಬಿದಿರೆ ಅಲಂಕಾರ್ ಸಂಸ್ಥೆಯ ಉದ್ಯೋಗಿ ಗಾಂಧಿನಗರ ಕಡಪಳ್ಳ ನಿವಾಸಿ ನವ್ಯಾ ಆತ್ಮಹತ್ಯೆಗೆ ಸಂಬಂಧಿಸಿ ಆಕೆಯ ಪ್ರಿಯಕರ ಮಳಲಿ ಸಮೀಪದ ಮನೋಜ್ ಎಂಬಾತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ನವ್ಯಾ ಮತ್ತು ಮನೋಜ್ ಪರಸ್ಪರ ಪ್ರೀತಿಸುತ್ತಿದ್ದು ಇತ್ತೀಚಿನಿಂದ ಆತ ನವ್ಯಾಳನ್ನು ದೂರ ಮಾಡಿ ಪ್ರೇಮ ನಿರಾಕರಿಸುತ್ತಿದ್ದನೆನ್ನಲಾಗಿದೆ.ಇದೇ ಬೇಸರದಿಂದ ನವ್ಯಾ ತನ್ನ ಸ್ನೇಹಿತೆಯೊಂದಿಗೆ ಗುರುಪುರ ಸೇತುವೆ ಬಳಿ ಹೋಗಿ ಅಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ನವ್ಯಾಳ ಆತ್ಮಹತ್ಯೆಗೆ ಕಾರಣನಾದ ಮನೋಜ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.







































