ಮಡಂತ್ಯಾರಿನಲ್ಲಿ ನಡೆದ ಜೆಸಿಐ ವಲಯ 15 ರ ಸಮಾವೇಶದಲ್ಲಿ 2026 ನೇ ಸಾಲಿನ ವ್ಯವಹಾರ ಕ್ಷೇತ್ರದಲ್ಲಿ ವಲಯದ ಪ್ರತಿಷ್ಠಿತ ‘ಸಾಧನಾಶ್ರೀ’ ಪ್ರಶಸ್ತಿಯನ್ನು ಜೆಸಿಐ ಮೂಡುಬಿದಿರೆ ತ್ರಿಭುವನ್ ಘಟಕದ ಪೂರ್ವಾಧ್ಯಕ್ಷರೂ, ಮೂಡುಬಿದಿರೆ ನ್ಯೂ ದುರ್ಗಾ ಡಿಜಿಟಲ್ಸ್ ನ ಮಾಲಕರೂ ಆಗಿರುವ ಸಂತೋಷ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ವಲಯದ ಪದಾಧಿಕಾರಿಗಳು, ಮೂಡುಬಿದಿರೆ ಜೆಸಿಐ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








































