ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿಯ ಉದ್ಘಾಟನೆಯು ಜ.26 ರಂದು ಬೆಳಿಗ್ಗೆ 10-30 ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಎಸ್.ಪ್ರವೀಣ್ ಕುಮಾರ್ ಅವರು ತಿಳಿಸಿದ್ದಾರೆ.
ಸಹಕಾರ ರತ್ನ ಎಂ.ಎನ್.ರಾಜೇಂದ್ರ ಕುಮಾರ್ ಅವರು ನೂತನ ಕಚೇರಿಯನ್ನು ಉದ್ಘಾಟಿಸಲಿದ್ದು ಮಾಜಿ ಸಚಿವರಾದ ಕೆ.ಅಭಯಚಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಕಂಪ್ಯೂಟರ್ ಉದ್ಘಾಟಿಸಲಿದ್ದಾರೆ.
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಭಾಸ್ಕರ ಎಸ್.ಕೋಟ್ಯಾನ್ ಅವರು ಪಡಿತರ ವಿಭಾಗವನ್ನು ಉದ್ಘಾಟಿಸಲಿದ್ದು ಸಂಘದ ಅಧ್ಯಕ್ಷ ಎಸ್.ಪ್ರವೀಣ್ ಕುಮಾರ್ ಅವರು ಎಂಕೆಸಿಸಿ ಸಾಲ ವಿತರಣೆ ಮಾಡಲಿದ್ದಾರೆ.

ಎಕ್ದಲೆಂಟ್ ಕಾಲೇಜು ಮುಖ್ಯಸ್ಥ ಯುವರಾಜ್ ಜೈನ್ ಅವರು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದು ಮೂಡುಬಿದಿರೆ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅವರು ಉಳಿತಾಯ ಖಾತೆ ಪುಸ್ತಕ ವಿತರಣೆ ಮಾಡಲಿದ್ದಾರೆ.ಉದ್ಯಮಿ ಕೆ.ಶ್ರೀಪತಿ ಭಟ್ ಅವರು ಸಂಚಯ ಠೇವಣಿ ವಿತರಣೆ, ಎಂಸಿಎಸ್ ಬ್ಯಾಂಕ್ ನ ಚಂದ್ರಶೇಖರ ಎಂ.ಅವರು ವೈಯಕ್ತಿಕ ಸಾಲ ವಿತರಣೆ ಮಾಡಲಿದ್ದು ಉದ್ಯಮಿ ತಿಮ್ಮಯ್ಯ ಶೆಟ್ಟಿ ಅವರು ನವೋದಯ ಸ್ವಸಹಾಯ ಖಾತೆ ವಿತರಣೆ ಮಾಡಲಿದ್ದಾರೆ.
ಎಸ್.ಡಿ.ಸಂಪತ್ ಸಾಮ್ರಾಜ್ಯ,ಸತೀಶ್ ಕೆ.ಕಾಶಿಪಟ್ಣ, ಸತೀಶ್ ವಿ.ಶೆಟ್ಟಿ, ವಸಂತ್ ಬೆರ್ನಾರ್ಡ್, ಆಗ್ನೆಸ್ ಡಿಸೋಜ ,ಪ್ರಶಾಂತ್ ಡಿಸೋಜ,ಸಂತೋಷ್ ಕೋಟ್ಯಾನ್, ಹಸನಬ್ಬ ಸಹಿತ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದ್ದಾರೆ.





