ಕಳೆದ ಹನ್ನೊಂದು ವರ್ಷಗಳಿಂದ ಮೂಡುಬಿದಿರೆ ಬಸ್ಸುನಿಲ್ದಾಣ ಬಳಿಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿರುವ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಪುರಸಭಾ ಕಚೇರಿ ಎದುರಿನ ಫಾರ್ಚೂನ್ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ನೂತನ ಕಚೇರಿಯನ್ನು ಗುರುವಾರ ಬೆಳಿಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಜೈನಮಠದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಸಂಘದ ಅಧ್ಯಕ್ಷ ರಂಜಿತ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಡಾ.ಎಂ.ಮೋಹನ ಆಳ್ವ,ಚೌಟರ ಅರಮನೆಯ ಕುಲದೀಪ್ ಎಂ, ಉದ್ಯಮಿ ಕೆ.ಶ್ರೀಪತಿ ಭಟ್,ಮೇಘನಾಥ ಶೆಟ್ಟಿ,ಅಬುಲ್ ಅಲಾ ಪುತ್ತಿಗೆ, ಅಶ್ವಿನ್ ಜೆ.ಪಿರೇರಾ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ರಂಜಿತ್ ಪೂಜಾರಿ ಸ್ವಾಗತಿಸಿ ನಿರ್ದೇಶಕ ರಮೇಶ್ ಶೆಟ್ಟಿ ವಂದಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು.
ನಿರ್ದೇಶಕರಾದ ಸುರೇಶ್ ಪೂಜಾರಿ, ರವೀಂದ್ರ ಕರ್ಕೇರ,ಗೋಪಾಲ ಶೆಟ್ಟಿಗಾರ್, ರತ್ನಾಕರ ಪೂಜಾರಿ,ರಾಜೇಂದ್ರ ಬಿ, ಶರತ್ ಶೆಟ್ಟಿ, ಉಷಾ ಭಂಡಾರಿ,ನಾಗೇಶ್ ನಾಯ್ಕ,ಮೀನಾಕ್ಷಿ ಅಂಚನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








































