ಕಲ್ಲಮುಂಡ್ಕೂರು ಸೊಸೈಟಿ ಅಧ್ಯಕ್ಷರಾಗಿ ಕೇಶವ ಪೂಜಾರಿ

Picture of Namma Bedra

Namma Bedra

Bureau Report

ಕಲ್ಲಮುಂಡ್ಕೂರು ವ್ಯ‌.ಸೇ.ಸ.ಸಂಘದ ಅಧ್ಯಕ್ಷರಾಗಿ ಕೇಶವ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಸುಧಾಕರ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಇತ್ತೋಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 10 ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಇಬ್ಬರು ಆಯ್ಕೆಯಾಗಿದ್ದರು.
ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಕೇಶವ ಪೂಜಾರಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಮುಖಂಡರ ಅಭ್ಯರ್ಥಿ ವಿದ್ಯಾನಂದ ಎಂಬವರಾಗಿದ್ದರು. ಆದರೆ ಕೇಶವ ಪೂಜಾರಿ ಅವರು ಕೂಡಾ ಆಕಾಂಕ್ಷಿಯಾಗಿದ್ದು ನಾಮಪತ್ರ ಸಲ್ಲಿಸಿದ್ದರು.
ಗುಪ್ತ ಮತದಾನದಲ್ಲಿ ಕೇಶವ ಪೂಜಾರಿ ಅವರು ಆಯ್ಕೆಯಾಗಿದ್ದು ಬಿಜೆಪಿಯವರೇ ಆಗಿದ್ದಾರೆ.ಆದರೆ ಶಾಸಕ ಕೋಟ್ಯಾನ್ ಸಹಿತ ಕೆಲವು ಪ್ರಮುಖರ ಅಭ್ಯರ್ಥಿ ವಿದ್ಯಾನಂದ ಆಗಿದ್ದರೆಂದು ತಿಳಿದು ಬಂದಿದೆ. ಈ ಬೆಳವಣಿಗೆಯಿಂದಾಗಿ ಒಂದು ಬಣಕ್ಕೆ ಸೋಲಾಗಿದ್ದು ಮತ್ತೊಂದು ಬಣ ಮೇಲುಗೈ ಸಾಧಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top