ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಅಟಲ್ ಜೀ ಜನಸೇವಾ ಕೇಂದ್ರವಿದೆ.ಅದಕ್ಕೆ ಸಕಾಲ ಅಂತಲೂ ಹೇಳುತ್ತಾರೆ.ಅಲ್ಲೀಗ ಪ್ರತಿದಿನ ಹೌಸ್ ಫುಲ್.
ಈಗ ಎಸ್.ಐ.ಆರ್, ಶಾಲಾ ಕಾಲೇಜು ಪ್ರಾರಂಭ ಅಂತ ಜಾತಿ ಆದಾಯ ಪತ್ರ,ಅದೂ ಇದೂ ಅಂತ ಅತೀ ಅಗತ್ಯವಾಗಿ ಬೇಕಾಗುವ ದಾಖಲೆಗಳು.
ಅದೆಲ್ಲಾ ಸಿಗಬೇಕಾದರೆ ಕೆಲವರ ಸಹಿ,ಸಾಕ್ಷಿ ಅಂತ ಜನರಿಗೆ ಮಿತ್ತ್,ತಿರ್ತ್ ಹೋಗಿ ಹೋಗಿ ಸಾಕಾಗುತ್ತದೆ.
ಹಾಗಂತ ಅಲ್ಲಿ ಸಿಗುತ್ತಿಲ್ಲವೆಂದಲ್ಲ- ಸಕಾಲದಲ್ಲಿ ಸಿಗುವುದಿಲ್ಲವಷ್ಟೆ.
ಅದಕ್ಕೆ ಕಾರಣವಿದೆ. ಆ ದಾಖಲೆಗಳನ್ನು ಪರಿಶೀಲಿಸಿ ಪತ್ರ ಕೊಡುವ ಸಿಬ್ಬಂದಿ ಒಬ್ಬರೇ ಇರುವುದು.ಅವರು ಅಶ್ವಿನಿ.ಜನರಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿ ಒಳ್ಳೆಯ ಸಿಬ್ಬಂದಿ ಎಂದೆನಿಸಿಕೊಂಡವರು.ಆದರೆ ಈ ತುರ್ತು ಪರಿಸ್ಥಿತಿಯಲ್ಲಿ ಅವರೊಬ್ಬರಿಂದ ಅದು ಸಾಧ್ಯವಾಗುತ್ತಿಲ್ಲ.ಕಷ್ಟವಾಗುತ್ತಿದೆ. ಜನರು ಕ್ಯೂ ನಿಲ್ಲುವಂತಾಗಿದೆ.
ಜನರು ಮತ್ತು ಸಿಬ್ಬಂದಿಯ ಕಷ್ಟ ಪಡುಮಾರ್ನಾಡು ಗ್ರಾ.ಪಂ.ಮಾಜಿ ಸದಸ್ಯ, ಭೂ ನ್ಯಾಯ ಮಂಡಳಿಯ ಸದಸ್ಯ ರಮೇಶ್ ಶೆಟ್ಟಿ ಮತ್ತು ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಅವರಿಗೆ ಅರ್ಥವಾಗಿದೆ.
ಅವರಿಬ್ಬರೂ ಈ ಸಮಸ್ಯೆಯನ್ನರಿತು ಜನರಿಗೆ ತೊಂದರೆಯಾಗಬಾರದು, ಸಕಾಲದಲ್ಲಿ ಸಿಗುವಂತಾಗಬೇಕೆಂಬ ದೃಷ್ಟಿಯಲ್ಲಿ ಉಪತಹಾಶೀಲ್ದಾರ್ ಅವರನ್ನು ಸಂಪರ್ಕಿಸಿ ಕೂಡಲೇ ಈ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳಲು ಒಂತೆ ಸಮಯದ ಮಟ್ಟಿಗಾದರೂ ಇನ್ನೊಬ್ಬರು ಸಿಬ್ಬಂದಿಯನ್ನು ನೇಮಕಗೊಳಿಸಬೇಕೆಂದು ಆಗ್ರಹಿಸಿದ್ದಾರೆ.






