ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಅಳಿಯೂರಿನ ಸುಕುಮಾರ್ ಜೈನ್ ಅವರು ಆಯ್ಕೆಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ಸಕ್ರಿಯರಾಗಿರುವ ಸುಕುಮಾರ್ ಜೈನ್ ಅವರು ಮಾಜಿ ಶಾಸಕ ಅಭಯಚಂದ್ರ,ಜನಾರ್ಧನ ಪೂಜಾರಿ, ವಿನಯಕುಮಾರ್ ಸೊರಕೆ, ಮಿಥುನ್ ರೈ, ಪದ್ಮರಾಜ್ ಪೂಜಾರಿ ಅವರ ಚುನಾವಣಾ ಸಂದರ್ಭದಲ್ಲಿ ಅಳಿಯೂರು ಭಾಗದ ಜವಾಬ್ದಾರಿ ತೆಗೆದುಕೊಂಡು ಕಾರ್ಯ ನಿರ್ವಹಿಸಿದ್ದರು.







