ಮೂಡುಬಿದಿರೆ:ಮಸ್ಜಿದುನ್ನೂರು ಜುಮ್ಮಾ ಮಸೀದಿ ಮರಿಯಾಡಿಯಲ್ಲಿ ಮಂಗಳವಾರ ಸಂಜೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಧಾರ್ಮಿಕ ಸಭೆ ಹಾಗು ಮಿಲಾದ್ ಫೆಸ್ಟ್ ಕಾರ್ಯಕ್ರಮ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮರಿಯಾಡಿ ಮಸೀದಿಯ ಖತೀಬ್ ಉಸ್ತಾದ್ ಜೈನುದ್ದೀನ್ ಮದನಿ ಪ್ರತಿಯೊಬ್ಬರ ಜಾತಿ, ಧರ್ಮದ ಆಚರಣೆ ಬೇರೆ ಆಗಿರಬಹುದು. ಆದರೆ ನಾವೆಲ್ಲರು ಮಾನವ ಧರ್ಮವನ್ನು ಗೌರವಿಸಬೇಕು. ಈದ್ ಮಿಲಾದ್ ಹಬ್ಬವು ಸಹಬಾಳ್ವೆಯನ್ನು ಬೋಧಿಸುತ್ತದೆ ಎಂದರು.
ಮುಖ್ಯ ಅತಿಥಿ ಪತ್ರಕರ್ತ ಪ್ರಸನ್ನ ಹೆಗ್ಡೆ ಮಾತನಾಡಿ ಜಾತಿ ಮತ ಮರೆತು ಪರಸ್ಪರ ಪ್ರೀತಿ, ವಿಶ್ವಾಸ, ಹಾಗೂ ಸಾಮರಸ್ಯದಿಂದ ಬದುಕಬೇಕೆಂಬುದು ಮುಹಮ್ಮದ್ ಪೈಗಂಬರವರ ಸಂದೇಶವಾಗಿದೆ. ಇವರ ಸಂದೇಶ ಎಲ್ಲಾ ಸಮುದಾಯದವರಿಗು ಆದರ್ಶವಾಗಿದೆ ಎಂದರು.
ಮಸೀದಿ ಅಧ್ಯಕ್ಷ ಹಾಮ್ಮದ್ ಕುಡಲಕಲ್ಲು ಅಧ್ಯಕ್ಷತೆ ವಹಿಸಿದರು.
ಪುರಸಭೆ ಮಾಜಿ ಸದಸ್ಯ ರಾಜೇಶ್ ಕೋಟೆಗಾರ್, ಪ್ರಮುಖರಾದ ಗಂಗಾಧರ ಬಂಗೇರ, ಆನಂದ ಕುಮಾರ್, ಸುರೇಂದ್ರ ಶೆಟ್ಟಿ, ಬಾಲಕೃಷ್ಣ ಬಿ.ಕೆ, ಜಮಾತ್ ನ ಹಿರಿಯರಾದ ಹಾಮ್ಮದ್ ಬಿ.ಕೆ, ಸಿದ್ದಿಕ್ ಬಿಕೆ, ಹಾಗು ಕಿಲ್ಲರ್ ಉಸ್ತಾದ್ ಮತ್ತು ಮಸೀದಿ ಸಮಿತಿ ಪ್ರಮುಖರು ಉಪಸ್ಥಿತರಿದ್ದರು. ಮಕ್ಕಳಿಂದ ಮಿಲಾದ್ ಫೆಸ್ಟ್ ಕಾರ್ಯಕ್ರಮ ನಡೆಯಿತು.







































