ಈದ್ ಮಿಲಾದ್ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್. ಕಾಶಿಪಟ್ಣ ಯುನಿಟ್ ಹಾಗೂ ದಾರುನ್ನೂರ್ ಯುನಿಟ್ ವತಿಯಿಂದ ಕಾಶಿಪಟ್ಣ ಗ್ರಾಮದ ರಸ್ತೆ ಬದಿಗಳಲ್ಲಿದ್ದ ಕಸ, ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಎಸ್.ಕೆ.ಎಸ್.ಎಸ್.ಎಫ್.ನ ಕಾಶಿಪಟ್ಣ ಹಾಗೂ ದಾರುನ್ನೂರ್ ಯುನಿಟ್ ನ ಸದಸ್ಯರು, ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಯುವಕರ ಈ ಸಾಮಾಜಿಕ ಸೇವೆಗೆ ಕಾಶಿಪಟ್ಣ ಗ್ರಾ.ಪಂ.ನಿಕಟಪೂರ್ವಾಧ್ಯಕ್ಷ ಸತೀಶ್ ಕೆ.ಹಾಗೂ ಪಿಡಿಒ ಅವರು ಅಭಿನಂದಿಸಿದ್ದಾರೆ.







































