ಮೂಡುಬಿದಿರೆ:ಪ್ರಿಯದರ್ಶಿನಿ ಕೊಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ಮೂಡುಬಿದಿರೆ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗು ಉಚಿತ ವೈದ್ಯಕೀಯ ಶಿಬಿರವು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಡಂಗಲ್ಲು ರಾಣೆಯಾರ್ ಸಭಾಭವನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜನಸ್ನೇಹಿ ಸೇವೆಯನ್ನು ನೀಡಿ ಅಲ್ಪಾವಧಿಯಲ್ಲೆ ಪ್ರಗತಿಯನ್ನು ಸಾಧಿಸಿದ ಪ್ರಿಯದರ್ಶಿನಿ ಸೊಸೈಟಿ ಸಾಮಾಜಿಕ ಸೇವೆಗಳಲ್ಲು ತೊಡಗಿಸಿಕೊಂಡಿರುವುದು ಶ್ಲಾಘನಾರ್ಹ ಕಾರ್ಯ. ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದರು.

ಅಧ್ಯಕ್ಷತೆ ವಹಿಸಿದ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡು ಪ್ರಿಯದರ್ಶಿನಿ ಕೊಆಪರೇಟಿವ್ ಸೊಸೈಟಿ ತನ್ನ ಲಾಭಾಂಶದಲ್ಲಿ ಜನಪರ ಸೇವೆಯನ್ನು ಮಾಡುತ್ತಾ ಬಂದಿದೆ. ಮೂಡುಬಿದಿರೆ ಶಾಖೆಯು ಉತ್ತಮ ಅಭಿವೃದ್ಧಿಯನ್ನು ಕಾಣುತ್ತಿದ್ದು ಸೊಸೈಟಿಯ 5 ನೇ ಶಾಖೆ ಶೀಘ್ರದಲ್ಲಿ ಉಡುಪಿಯಲ್ಲಿ ಆರಂಭವಾಗಲಿದೆ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಡಾ.ಆಶೀರ್ವಾದ್,
ದೇವಾಡಿಗರ ಸುಧಾರಕರ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ, ಪುರಸಭೆ ಮಾಜಿ ಸದಸ್ಯರಾದ ಕೊರಗಪ್ಪ, ರೂಪಾ ಸಂತೋಷ್ ಶೆಟ್ಟಿ, ಯುವ ವಾಹಿನಿ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಜ್ವಲ್ ಕುಲಾಲ್, ರಾಣಿಯಾರ್ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಕೆ.ಎಸ್, ರೈತ ಸಂಘ ಮಾರ್ಪಾಡಿ ಘಟಕದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸೊಸೈಟಿ ಮೆನೇಜರ್ ಅಭಿಷ್ಠಾ ಜೈನ್ ನಿರೂಪಿಸಿದರು. ಸಿಇಒ ಸುದರ್ಶನ್ ವಂದಿಸಿದರು.
ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು ಇದರ ಆಡಳಿತ ನಿರ್ದೇಶಕ ಡಾ.ಶಿವಾನಂದ ಪ್ರಭು ನೇತ್ರತ್ವದ ತಂಡ ಆರೋಗ್ಯ ಶಿಬಿರವನ್ನು ನಡೆಸಿಕೊಟ್ಟಿತು.







































