ಮೂಡುಬಿದಿರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಶ್ರೀಧರ್ ಪಿ. ಹಾಗೂ ಕುಂದಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಮೂಡುಬಿದಿರೆ ಸಂಪಿಗೆ ನಿವಾಸಿ ಪ್ರಕಾಶ್ ಪೂಜಾರಿ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಮುಂಬಡ್ತಿ ಪಡೆದಿದ್ದಾರೆ.
ಶ್ರೀಧರ್ ಪಿ.ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹಾಗೂ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ( ಕೆಸಿಡಿಸಿ) ಮಂಗಳೂರು ಇಲ್ಲಿಗೆ ವಿಭಾಗೀಯ ವ್ಯವಸ್ಥಾಪಕರಾಗಿ ಮುಂಬಡ್ತಿ ಪಡೆದಿದ್ದಾರೆ.
ಪ್ರಕಾಶ್ ಪೂಜಾರಿ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹಾಗೂ ಕರ್ನಾಟಕ ಫಾರೆಸ್ಟ್ ಡೆವಲಪ್ಮೆಂಟ್ ಕಾರ್ಪೊರೇಷನ್( ಕೆಎಫ್ ಡಿಸಿ) ಪುತ್ತೂರು ,ಇಲ್ಲಿಗೆ ವಿಭಾಗೀಯ ವ್ಯವಸ್ಥಾಪಕರಾಗಿ ಮುಂಬಡ್ತಿ ಪಡೆದಿದ್ದಾರೆ.
ಶ್ರೀಧರ್ ಅವರು ಮೂಡುಬಿದಿರೆಯಲ್ಲಿ ವಲಯಾರಣ್ಯಾಧಿಕಾರಿಯಾಗಿ, ಮಂಗಳೂರಿನಲ್ಲಿ ಹಾಗೂ ಮೂಡುಬಿದಿರೆಯಲ್ಲಿ ಎಸಿಎಫ್ ಆಗಿ ಸೇವೆ ಸಲ್ಲಿಸಿದ್ದು ಪ್ರಕಾಶ್ ಪೂಜಾರಿ ಅವರು ಕೂಡಾ ಮೂಡುಬಿದಿರೆಯಲ್ಲಿ ವಲಯಾರಣ್ಯಾಧಿಕಾರಿಯಾಗಿ, ಕುಂದಾಪುರ ಉಪವಿಭಾಗದ ಎಸಿಎಫ್ ಆಗಿ ಸೇವೆ ಸಲ್ಲಿಸಿದ್ದರು.
ಇಬ್ಬರು ಅಧಿಕಾರಿಗಳು ಕೂಡಾ ಜಿಲ್ಲೆಯ ವಿವಿಧೆಡೆ ಸೇವೆ ಸಲ್ಲಿಸಿ ಬೆಸ್ಟ್ ಆಫೀಸರ್ಸ್ ಎಂದು ಸಾರ್ವಜನಿಕರಿಂದ ಗುರುತಿಸಿಕೊಂಡಿದ್ದರು.
ಇಬ್ಬರು ಅಧಿಕಾರಿಗಳ ಸೇವಾವಧಿಯಲ್ಲೂ ಇಲಾಖೆಯ ವತಿಯಿಂದ ಸಾಕಷ್ಟು ಜನಪರ ಕೆಲಸಗಳಾಗಿದ್ದು ಅರಣ್ಯ ಇಲಾಖೆಯ ಯೋಜನೆಗಳನ್ನು ತಮ್ಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕರಾಗಿ ಶ್ರಮಿಸಿದ್ದರು.







































