ಬೆದ್ರದಲ್ಲಿ ಈ ಪೊಲೀಸ್ ಚೌಕಿಯ ಅಗತ್ಯ ಉಂಟಾ?

Picture of Namma Bedra

Namma Bedra

Bureau Report

ಸರಕಾರಿ ಆಸ್ಪತ್ರೆಯ ಎದುರು,ಪಟ್ಟಾಡಿ ಸ್ಯಾನಿಟರಿ ಎದುರು ಇರುವ ಪೊಲೀಸ್ ಚೌಕಿ ಯಾವ ಪ್ರಯೋಜನಕ್ಕೂ ಬಾರದೆ ಸಂಜೆಯ ವೇಳೆ ಕೆಲ ವಾಹನಗಳಿಗೆ ತೊಂದರೆಯನ್ನೇ ಉಂಟು ಮಾಡುತ್ತಿದೆ.
ಮುತ್ತೂಟ್ ಫೈನಾನ್ಸ್ ಅವರ ಕೊಡುಗೆಯ ಈ ಚೌಕಿಯಲ್ಲಿ ಒಂದೇ ಒಂದು ಸಲ, ಒಬ್ಬನೇ ಒಬ್ಬ ಪೊಲೀಸ್ ಇದ್ದದ್ದನ್ನು ನೋಡಿದವರು ಯಾರೂ ಇಲ್ಲ‌.
ನೋ ಎಂಟ್ರಿಗೆಂದು ಈ ಚೌಕಿಯನ್ನು ನಿರ್ಮಾಣ ಮಾಡಲಾಗಿತ್ತು.ಆದರೆ ಈ ರಸ್ತೆಯಲ್ಲೇ ಹೆಚ್ಚು ವಾಹನಗಳು ತಿರುಗುವುದು.ಬಸ್ಸು ನಿಲ್ದಾಣದಿಂದ ಹೊರಡುವ ಬಸ್ಸುಗಳು,ಮಸೀದಿ ಕಡೆಯಿಂದ ಇರುವೈಲು ಕಡೆಗೆ ಅಥವಾ ಬೇರೆಡೆಗೆ ಹೋಗುವ ವಾಹನಗಳು ಇದೇ ರಸ್ತೆಯಿಂದ ಬಂದರೆ ಅತ್ತ ಇರುವೈಲು ಕಡೆಯಿಂದ,ಸರಕಾರಿ ಆಸ್ಪತ್ರೆ ಎದುರು ಟರ್ನಾಗಿ ಬಸ್ ಸ್ಟಾಂಡಿನತ್ತ ಹೋಗುವ ವಾಹನಗಳು ಇದೇ ಚೌಕಿ ದಾಟಿ ಹೋಗಬೇಕು.


ಮೊದಲೇ ಇಕ್ಕಟ್ಟಾದ ರಸ್ತೆ‌.ಎದುರು ಬದುರು ವಾಹನಗಳು ಒಂದಾಗುವಾಗ ಟ್ರಾಫಿಕ್ ಜಾಮ್ ಆಗುತ್ತದೆ.ಚೌಕಿಯನ್ನು ತೆಗೆದರೆ ಒಂತೆ ಜಾಗ ಆಗುತ್ತದೆ.
ಚೌಕಿ ಇದ್ದು ಹೆಚ್ಚಿನ ವಾಹನಗಳಿಗೆ ತಿರುಗಿಸಲು ಮತ್ತು ಸೈಡ್ ಕೊಡಲೇ ಕಷ್ಟವಾಗುತ್ತಿದೆ.ಇದೊಂದು ಉಪಯೋಗಕ್ಕಿಲ್ಲದ ಚೌಕಿಯಾಗಿದ್ದು ಅಪಾಯ ಸಂಭವಿಸುವ ಲಕ್ಷಣವೇ ಹೆಚ್ಚು.ಸಾಲದ್ದಕ್ಕೆ ಚರಂಡಿಯ ಮೇಲೆ ಹಾಸುಕಲ್ಲುಗಳನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ.ಟೂ ವೀಲರ್ಸ್ ನವರಿಗೆ ಈ ಹಾಸುಕಲ್ಲುಗಳು ಅಪಾಯಕಾರಿಯಾಗಿದೆ.
ಇದು ಪೊಲೀಸ್ ಚೌಕಿ ಹೌದೆಂದಾದರೆ ಅಲ್ಲಿ ಪೊಲೀಸರು ಬೇಕು.ಸುಮ್ಮನೆ ಚೌಕಿಯನ್ನು ನಿಲ್ಲಿಸಿರುವುದರಿಂದ ಯಾವ ಪ್ರಯೋಜನವೂ ಇಲ್ಲ.ಇದನ್ನು ತೆರವುಗೊಳಿಸುವುದೇ ಬೆಸ್ಟ್.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top