ಗುಡಿಸಲಿನ ಕುಟುಂಬಕ್ಕೆ ಆಸರೆಯಾದ ಬೆದ್ರ ಯುವವಾಹಿನಿ. ಸೆ.6 ಕ್ಕೆ ‘ನಂದಗೋಕುಲ’ ಹಸ್ತಾಂತರ

Picture of Namma Bedra

Namma Bedra

Bureau Report

ಮೂಡುಮಾರ್ನಾಡಿನ ಸುಮಿತ್ರಾ ವಿಶ್ವನಾಥ ಪೂಜಾರಿಯವರದ್ದು ಬಡ ಕುಟುಂಬ. ಅದೆಷ್ಟು ಬಡತನವೆಂದರೆ ಹಳೆಯ ಗುಡಿಸಲಿನಲ್ಲೇ ವಾಸ.ಗಂಡ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿರುವ ಸುಮಿತ್ರಾ ಅವರು ಯುವವಾಹಿನಿ ಮೂಡುಬಿದಿರೆ ಘಟಕದ ಸದಸ್ಯೆ.


ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದರೂ ಸಾಮಾಜಿಕ ಸೇವೆ, ಯುವವಾಹಿನಿಯ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡವರು.
ಬಡತನದ ನೋವು,ಆರ್ಥಿಕ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಇದ್ದರೂ ಸಾಮಾಜಿಕವಾಗಿ ಗುರುತಿಸಿಕೊಳ್ಳುವುದರೊಂದಿಗೆ ಆ ಎಲ್ಲ ನೋವು ಕಷ್ಟಗಳನ್ನು ನುಂಗಿಕೊಂಡು ಸದಾ ಉಲ್ಲಾಸದಿಂದಲೇ ಕೆಲಸ ಮಾಡುತ್ತಿದ್ದ ಸುಮಿತ್ರಕ್ಕನ ಕಷ್ಟಗಳು ಯುವವಾಹಿನಿಯವರ ಗಮನಕ್ಕೆ ಬಂದಿದೆ.
ಅವರ ಗುಡಿಸಲ ಬದುಕಿಗೆ ತಾವು ಆಸರೆಯಾಗಬೇಕೆಂದು ನಿರ್ಧರಿಸಿದವರು ಈ ಹಿಂದೆ ಅಧ್ಯಕ್ಷರಾಗಿದ್ದ ಶಂಕರ್ ಎ‌.ಕೋಟ್ಯಾನ್.
ಅವರು ಎರಡು ವರ್ಷಗಳ ಹಿಂದೆಯೇ ಅವರಿಗೊಂದು ಸುಮಿತ್ರಕ್ಕನಿಗೊಂದು ಮನೆಯ ಮಾಡಿ ಕೊಡಬೇಕು, ಆ ಬಡ ಕುಟುಂಬದ ಕತ್ತಲೆಯ ಬದುಕಿಗೊಂದು ಹೊಸ ಬೆಳಕು ತೋರಿಸಬೇಕೆಂದು ನಿರ್ಧರಿಸಿ ಘಟಕದ ಪದಾಧಿಕಾರಿಗಳಲ್ಲಿ ವಿಷಯವನ್ನು ತಿಳಿಸಿದ್ದಾರೆ.
ಘಟಕದ ಪದಾಧಿಕಾರಿಗಳು, ಸದಸ್ಯರು, ದಾನಿಗಳಿಂದ ನೆರವನ್ನು ಪಡೆದು ಒಂದು ಸುಂದರವಾದ ಹೊಸಮನೆಯನ್ನು ನಿರ್ಮಿಸಿದ್ದಾರೆ.ಅದಕ್ಕೆ ‘ ನಂದಗೋಕುಲ’ ಎಂಬ ಚೆಂದದ ಹೆಸರನ್ನೂ ಇಟ್ಟಿದ್ದಾರೆ.
ಸುಮಾರು 6 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನೆಯ ಹಸ್ತಾಂತರ ಕಾರ್ಯಕ್ರಮ ಸೆ.6 ರಂದು ನಡೆಯಲಿದೆ.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಹೈಕೋರ್ಟ್ ನ ಹೆಚ್ಚುವರಿ ಎಡ್ವೊಕೇಟ್ ಜನರಲ್ ಇರುವೈಲ್ ತಾರಾನಾಥ ಪೂಜಾರಿಯವರು ಮನೆಯನ್ನು ಹಸ್ತಾಂತರಿಸಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top