ಮೂಡುಬಿದಿರೆಯ ಕೊಡಂಗಲ್ಲಿನ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು.ಹಾಗಂತ ಹಾಲಿ- ಮಾಜಿ ಜನಪ್ರತಿನಿಧಿಗಳು, ಅಧಿಕಾರಿವರ್ಗದವರ ವಾಹನಗಳು ಇದೇ ರಸ್ತೆಯಲ್ಲಿ ಓಡಾಡಿದೆ.ಅವರ್ಯಾರಿಗೂ ತಮ್ಮ ವಾಹನ ಗುಂಡಿಯ ಮೇಲೆ ಹೋಗಿದೆ ,ಹೋಗುತ್ತಿದೆ ಅಂತ ಗೊತ್ತೇ ಆಗಿಲ್ಲ, ಗೊತ್ತಾದರೂ ವಾಹನದಿಂದಲೇ ಅಧಿಕಾರಿಗಳಿಗೆ ಕಾಲ್ ಮಾಡಿ ಹೇಳಬಹುದಿತ್ತು,ಅದನ್ನವರು ಮಾಡಿಲ್ಲ.
ಪುರಸಭೆಯ ವತಿಯಿಂದ ಇಂದು ಸರಿಯಾಗುತ್ತದೆ,ನಾಳೆ ಸರಿಯಾಗುತ್ತದೆ ಎಂದು ಕಾದೂ ಕಾದೂ ಸುಸ್ತಾದ ಈ ಭಾಗದ ರಿಕ್ಷಾ ಚಾಲಕರು ಇನ್ನೆಷ್ಟು ಸಲ ನಮ್ಮ ರಿಕ್ಷಾಗಳನ್ನು ಗುಂಡಿಗೆ ಹಾಕುತ್ತಾ ಹೋಗುವುದು ? ಅಂತ ತಾವೇ ಕೊಟ್ಟು ಪಿಕ್ಕಾಸು ಬುಟ್ಟಿಯನ್ನು ತಂದು ತಾವೇ ಸಮತಟ್ಟುಗೊಳಿಸಿ ಮಾದರಿಯಾಗಿದ್ದಾರೆ.



ರಿಕ್ಷಾ ಚಾಕಕರ ಈ ಸಾಮಾಜಿಕ ಕಾರ್ಯಕ್ಕೆ ಸ್ಥಳೀಯ ಮುಖಂಡರಾದ ಸಂತೋಷ್ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.








































