ಮೂಡುಬಿದಿರೆಯ ಕುರಲ್ ಕಲಾವಿದೆರ್ ಬೆದ್ರ ತಂಡದ ಈ ವರ್ಷದ ಹೊಸ ನಾಟಕ ‘ ಅಪ್ಪೆ’ ಎಂಬ ಭಕ್ತಿಪ್ರಧಾನ ನಾಟಕದ ಮೊದಲ ಪ್ರದರ್ಶನ ನಾಳೆ ( ಸೆ.9) ಸಂಜೆ 7-30 ಕ್ಕೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ತಂಡದ ಸಮಗ್ರ ನಿರ್ವಾಹಕಿ ಬಾಲಿಕಾ ಪ್ರಸಾದ್ ಪಡುಕೊಣಾಜೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಸಾದ್ ಆಳ್ವ ಪಡುಕೊಣಾಜೆ ಅವರ ಸಾರಥ್ಯದ ಕುರಲ್ ತಂಡವು ‘ಯೇರ್’ ಹಾಗೂ ‘ತೀರ್ಥ’ ಎಂಬ ಎರಡು ಯಶಸ್ವೀ ನಾಟಕಗಳ ಪೈಕಿ ಇದೀಗ ಮತ್ತೊಂದು ಹೊಸ ಕಲಾ ಕಾಣಿಕೆಯನ್ನು ಸಜ್ಜುಗೊಳಿಸಿ ರಂಗಭೂಮಿಗರ್ಪಿಸಲಿದೆ ಎಂದ ಅವರು ಪ್ರತಿಭಾವಂತ ಕಲಾವಿದರಿರುವ ನಮ್ಮ ತಂಡಕ್ಕೆ ಈ ವರ್ಷ ಯೋಗೀಶ್ ಪೂಜಾರಿ ಪೇರಲ್ಕೆ ಅವರು ನಾಟಕ ರಚಿಸಿ, ನಿರ್ದೇಶಿಸಿ,ನಟಿಸಲಿದ್ದಾರೆಙದು ಹೇಳಿದರು.
ನಿರ್ದೇಶಕ ಯೋಗೀಶ್ ಪೂಜಾರಿ ಪೇರಲ್ಕೆ ಅವರು ‘ತುಳುನಾಡಿನ ಜನರ ನಂಬಿಕೆಯ ಹಾಗೂ ಕಾರಣಿಕದ ತಾಯಿಯಾಗಿರುವ ಮಂತ್ರದೇವತೆಯ ಬಗ್ಗೆ ಒಂದು ನೈಜ ಕಥೆಯಾಧಾರಿತವಾಗಿ ಈ ನಾಟಕವನ್ನು ರಚಿಸಿದ್ದೇನೆ,ಇದು ಪೌರಾಣಿಕ ನಾಟಕವಲ್ಲ- ಸಾಮಾಜಿಕ ನಾಟಕವಾಗಿದ್ದು ಭಿನ್ನ ಸೆಟ್ಟಿಂಗ್ ಹಾಗೂ ದೃಶ್ಯಗಳ ಮೂಲಕ ನಾಟಕವು ಜನಮೆಚ್ಚುಗೆ ಪಡೆಯಲಿದೆ’ ಎಂದು ಹೇಳಿದರು.
ನಾಟಕಕ್ಕೆ ಸಾಹಿತ್ಯ ಒದಗಿಸಿದ ಚೇತನ್ ಕಾಶಿಪಟ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.








































