ಈ ಸೀಸನ್ ನ ಮೊದಲ ಕಂಬಳವಾಗಿರುವ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳಕ್ಕಿಂದು ಬೆಳಿಗ್ಗೆ ಚಾಲನೆ ಸಿಕ್ಕಿದೆ.
ಇದು ಪಣಪಿಲದಲ್ಲಿ ನಡೆಯುತ್ತಿರುವ ಹದಿನೇಳನೇ ವರ್ಷದ ಕಂಬಳ.ಹಿಂದೆಲ್ಲಾ ಪಣಪಿಲದ ನಂದೊಟ್ಟು ಯುವರಾಜ ಜೈನ್ ಅವರ ಮನೆಯೆದುರಿನ ಗದ್ದೆಯಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ಆಧುನಿಕ ಸ್ಪರ್ಶ ನೀಡಿರುವ ಪ್ರಮುಖರಲ್ಲಿ ಪಣಪಿಲದ ಯಂಗ್ ಮ್ಯಾನ್, ರಾಜಕೀಯ ಮುಖಂಡ ಅಶ್ವಥ್ ಕೆ.ಪಣಪಿಲ ಅವರ ಹೆಸರು ಮುಂಚೂಣಿಯಲ್ಲಿ ಕಂಡು ಬರುತ್ತದೆ.
ಯುವರಾಜ್ ಜೈನ್ ಅವರು ಹಲವು ವರ್ಷಗಳಲ್ಲಿ ಸ್ವತಃ ಖರ್ಚು ಮಾಡಿ ಕಂಬಳ ನಡೆಸಿದ್ದರು.ಹಿರಿಯರಾಗಿರುವ ಅವರ ಕಂಬಳದ ಮೇಲಿನ ಅಭಿಮಾನ,ಉತ್ಸಾಹದಿಂದ ಅಲ್ಲಿನ ಕಂಬಳ ನಡೆಯುತ್ತಿತ್ತು.ಈ ಪ್ರಾಯದಲ್ಲೂ ಅವರ ಉತ್ಸಾಹ ಮೆಚ್ಚುವಂತದ್ದು.ಕಂಬಳ ಸಮಿತಿಯ ಸಾರಥಿಯಾಗಿ ಅನೇಕ ಹಿರಿಯ ಕಿರಿಯರನ್ನು ಸೇರಿಸಿಕೊಂಡು ಮುಂದುವರಿಸುತ್ತಿದ್ದಾರೆ.
ಆದರೆ ಕಂಬಳ ಸಮಿತಿ ಮತ್ತು ಕಂಬಳದ ಯಶಸ್ಸಿನ ಹಿಂದಿರುವ ದೊಡ್ಡ ಶಕ್ತಿಯೆಂದರೆ ಅಶ್ವಥ್ ಪಣಪಿಲ.ಇದನ್ನು ಆಭಾಗದ ಜನರೇ ಒಪ್ಪುತ್ತಾರೆ.
ಕಂಬಳಕ್ಕೆ ದಿನ ನಿಗದಿಯಾದಂದಿನಿಂದ ಕಂಬಳ ಕರೆ,ಅಲ್ಲಿ ಆಗಬೇಕಾದ ಸರ್ವ ವ್ಯವಸ್ಥೆಗಳಿಗೆ, ಆಹ್ವಾನ ಪತ್ರಿಕೆ ಬಟವಾಡೆ,ಯುವಕರನ್ನು ಒಟದಟುಗೂಡಿಸಲು,ಸುಸಜ್ಜಿತವಾದ ವಾಹನಗಳ ಪಾರ್ಕಿಂಗ್ ಗೆ ಬೇಕಾದ ವ್ಯವಸ್ಥೆಗಳಿಗೆ ನಿರಂತರವಾಗಿ ಶ್ರಮಿಸುತ್ತಾ ಊರಿನ ಕಂಬಳವನ್ನು ಯಶಸ್ವಿಯಾಗಿ ಮುನ್ನಡೆಸಲು ಕಷ್ಟಪಡುತ್ತಿರುವ ಮನುಷ್ಯನೀತ.
ಸರ್ವರೊಂದಿಗೂ ಬೆರತುಕೊಂಡು ಆತ್ಮೀಯನಾಗಿ ಗುರುತಿಸಿಕೊಳ್ಳುವ ಇವರ ವ್ಯಕ್ತಿತ್ವವನ್ನು ಈಭಾಗದ ಯುವಕರು ಮೆಚ್ಚಿಕೊಂಡಿದ್ದಾರೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಕೈತಲಾಗುತ್ತಿದೆ.ಅಶ್ವಥ್ ಅವರನ್ನು ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನನ್ನಾಗಿ ಕಾಣಬೇಕೆಂಬ ಮಹದಾಸೆ ಯುವಕರನೇಕರಲ್ಲಿತ್ತು.ಆದರೆ ಮೀಸಲಾತಿ ಬೇರೆ ಬಂದಿರುವುದರಿಂದ ಅವರಿಗೆ ಆ ಅವಕಾಶ ತಪ್ಪಿದೆಯಾದರೂ ತಾಲೂಕು ಪಂಚಾಯತ್ ನಲ್ಲಿ ಅವಕಾಶವಿದೆ.ಅಶ್ವಥ್ ಮನಸ್ಸು ಮಾಡಿದರೆ ನೆಲ್ಲಿಕಾರು ತಾ.ಪಂ.ಕ್ಷೇತ್ರದಿಂದ ಸುಲಭವಾಗಿ ಆಯ್ಕೆಯಾಗುವ ವಾತಾವರಣವಿದೆ.
ಉಭಯ ಜಿಲ್ಲೆಗಳ ಕಂಬಳ ಸಮಿತಿಗಳನ್ನು ಗಮನಿಸಿದರೆ ಅತಿ ಸಣ್ಣ ಪ್ರಾಯದ ಪ್ರಾಯದ ಪ್ರಧಾನ ಕಾರ್ಯದರ್ಶಿಯಾಗಿರುವುದು ಪಣಪಿಲ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ಪಣಪಿಲ.ರಾಜಕೀಯದಲ್ಲೂ ದೊಡ್ಡದಾದ ಹೆಸರಿದೆ.
ಸರ್ವರ ಆತ್ಮೀಯನಾಗಿರುವ ಈ ಮದ್ಮಯನಿಗೆ ಉಜ್ವಲ ಭವಿಷ್ಯವಿದೆ.
ಅಶ್ವಥ್ ಅವರ ಸಾಂಸಾರಿಕ ಮತ್ತು ರಾಜಕೀಯ ಜೀವನಕ್ಕೆ ಯಶಸ್ಸಿನ ಹಾರೈಕೆ.












