ಮೂಡುಬಿದಿರೆ ಬಳಿ ಗೂಡ್ಸ್ ಲಾರಿ ಢಿಕ್ಕಿ: ಬೈಕ್ ಹಿಂಬದಿ ಸವಾರ ಮೃತ್ಯು

Picture of Namma Bedra

Namma Bedra

Bureau Report

ಮೂಡುಬಿದಿರೆಯ ಗಾಂಧಿನಗರದ ಬಳಿ ಇಂದು ಬೆಳಿಗ್ಗೆ ಗೂಡ್ಸ್ ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿ ಸವಾರ ಮೃತಪಟ್ಟಿದ್ದಾರೆ.
ಕೊಪ್ಪದ ಕುಮೇರು ಸಮೀಪದ ಮರಕಡ ನಿವಾಸಿ ಚಂದು ಕುಮಾರ್ (26) ಮೃತಪಟ್ಟ ಯುವಕ.
ಚಂದು ಅವರು ಎಂದಿನಂತೆ ತನ್ನ ಮೇಸ್ತ್ರಿ ಯಾದವ್ ಅವರ ಬೈಕಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.ಚಂದು ಹೆಲ್ಪರ್ ಆಗಿ ಕೆಲಸಕ್ಕೆ ಹೋಗುತ್ತಿದ್ದು ಇಂದು ಈ ಅವಘಡ ಸಂಭವಿಸಿದೆ.
ಹಿಂಬದಿಯಿಂದ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಚಂದು ಅವರು ಗಂಭೀರವಾಗಿ ಗಾಯಗೊಂಡಿದ್ದರು.ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಬೈಕ್ ಸವಾರ ಯಾದವ್ ಅಪಾಯದಿಂದ ಪಾರಾಗಿದ್ದಾರೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top